ಉದ್ದೇಶಗಳು

ಬೋಧನೆ
  • ಸಮಾಜದ ಬೆಳೆಯುತ್ತಿರುವ ಮತ್ತು ಬದಲಾಗುತ್ತಿರುವ ಅವಶ್ಯಕತೆಗಳಿಗನುಗುಣವಾಗಿ ಹಾಗೂ ವಿಶೇಷವಾಗಿ ರೈತ ಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಕೃಷಿ ಶಿಕ್ಷಣವನ್ನು ಸಂವೇದನಶೀಲವನ್ನಾಗಿ ಮಾಡುವುದು.
  • ಸಂಶೋಧನೆ, ವಿಸ್ತರಣೆ ಹಾಗೂ ಔದ್ಯಮಿಕ ಕ್ಷೇತ್ರಗಳಲ್ಲಿನ ನೂತನ ಹಾಗೂ ಸವಾಲಿನ ಕಾರ್ಯಗಳಿಗೆ ಹೆಚ್ಚಿನ ಕೌಶಲ್ಯದ ಮತ್ತು ಸಶಕ್ತ ಮಾನವ ಸಂಪನ್ಮೂಲ ಒದಗಿಸಲು ಸಜ್ಜುಗೊಳಿಸುವ ತರಬೇತಿ ನೀಡಲು ಚಲನಶೀಲ ಕೃಷಿ ಶಿಕ್ಷಣ ವ್ಯವಸ್ಥೆ ಸ್ಥಾಪಿಸುವುದು.
ಸಂಶೋಧನೆ
  • ಪಶು ಸಂಗೋಪನೆ ಮತ್ತು ಮೀನುಗಾರಿಕೆಯನ್ನೊಳಗೊಂಡಂತೆ ಕೃಷಿ ಉತ್ಪಾದನೆಯ ಮೂಲಕ ರೈತರ ಸಮಸ್ಯೆಗಳನ್ನು ಪರಿಹರಿಸುವ ಅಂತಿಮ ಬಳಕೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ದೀರ್ಘಾವಧಿಯಲ್ಲಿ ತಂತ್ರಜ್ಞಾನದ ಎಲ್ಲಾ ವಿಷಯಗಳಲ್ಲೂ ಅಭಿವೃದ್ಧಿ ಸಾಧಿಸುವ ಸಂಶೋಧನೆಯನ್ನು ಪೋಷಿಸುವುದು.
  • ಕ್ಷಿಪ್ರ, ಸಮರ್ಥ ಮತ್ತು ಕಡಿಮೆ ಬೆಲೆಯ ಸಂಶೋಧನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದನ್ನು ಖಾತರಿ ಪಡಿಸುವಂತಹ ಪ್ರಯೋಗಾಲಯಗಳು, ವಿಸ್ತೃತ ಕೃಷಿ ಕ್ಷೇತ್ರಗಳು ಮತ್ತು ಕಾರ್ಯವಾಹಿ ಸಂಶೋಧನಾ ನಿರ್ವಹಣಾ ವ್ಯವಸ್ಥೆಯನ್ನೊಳಗೊಂಡ ಅತ್ಯಾಧುನಿಕ, ಸುಸಜ್ಜಿತ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸುವುದು.
  • ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಕೈಗೊಳ್ಳಲು ಅರ್ಹ ಹಾಗೂ ಪ್ರತಿಭಾನ್ವಿತ ಸಿಬ್ಬಂದಿಯನ್ನು ಆಕರ್ಷಿಸುವುದು.
ವಿಸ್ತರಣೆ
  • ಸಂಶೋಧನೆಯ ಫಲಿತಾಂಶಗಳು ಮತ್ತು ಆವಿಷ್ಕಾರಗಳನ್ನು ರುಜುವಾತಾದ ಪ್ರಾತ್ಯಕ್ಷಿಕೆಗಳ ಮೂಲಕ ರೈತರಿಗೆ ಸೂಕ್ತ ವಿಧಾನಗಳ ಮೂಲಕ ಸಂವಹಿಸುವುದನ್ನು ಖಾತರಿ ಪಡಿಸಿಕೊಳ್ಳುವುದು. ಈ ವಿಧಾನವು ರೈತರ ಮತ್ತು ಸಂಶೋಧಕರ ನಡುವೆ ಸಂಬಂಧ ಕಲ್ಪಿಸುವ ಸೇತುವಂತೆ ಕಾರ್ಯ ನಿರ್ವಹಿಸುತ್ತದೆ ಹಾಗೂ ಸಕಾರಾತ್ಮಕ ಅಭಿಪ್ರಾಯ ಸಂಗ್ರಹಣೆಯ ಮೂಲಕ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
  • ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ರಾಜ್ಯ ಇಲಾಖೆಗಳ ತಳಮಟ್ಟದ ಕಾರ್ಯಕರ್ತರಿಗೆ ಮತ್ತು ಅಧಿಕಾರಿಗಳಿಗೆ ಸಂಬಂಧಿತ ಕ್ಷೇತ್ರಗಳಲ್ಲಿನ ಇತ್ತೀಚಿನ ಸಂಶೋಧನೆಗಳ ಕುರಿತು ವಿಷಯ ತಜ್ಞರಿಂದ ವಿಸ್ತೃತ ವ್ಯಾಪ್ತಿಯಲ್ಲಿ ತರಬೇತಿ ನೀಡುವುದರ ಮೂಲಕ ರೈತರಿಗೆ ಜ್ಞಾನ ಮತ್ತು ತಂತ್ರಜ್ಞಾನವನ್ನು ತಲುಪಿಸುವುದು.

Additional information