ಕನ್ನಡ ಅಧ್ಯಯನ ವಿಭಾಗ

ಕನ್ನಡ ಅಧ್ಯಯನ ವಿಭಾಗದ 2023ರ ಪ್ರಕಟಣೆಗಳು

ಶಿಕ್ಷಣ ಆಯೋಗದ ಪ್ರಾದೇಶಿಕ ಭಾಷೆಗಳಲ್ಲೂ ಶಿಕ್ಷಣ ಒದಗಿಸಬೇಕೆನ್ನುವ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ವಿಭಾಗವನ್ನು 1969-70ರಲ್ಲಿ ಪ್ರಾರಂಭಿಸಲಾಗಿದ್ದು ಕೃಷಿ ವಿಜ್ಞಾನ ಸಾಹಿತ್ಯವನ್ನು ಕನ್ನಡದಲ್ಲಿ ಪ್ರಕಟಿಸಲಾಗುತ್ತಿದೆ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಶಿಕ್ಷಣ ಇಲಾಖೆಯ ವೈಜ್ಞಾನಿಕ ಮತ್ತು ತಂತ್ರಜ್ಞಾನ ಶಬ್ದಾವಳಿ ಆಯೋಗವು ಪಠ್ಯಪುಸ್ತಕ/ಪರಾಮರ್ಶನ ಗ್ರಂಥಗಳನ್ನು ಕನ್ನಡದಲ್ಲಿ ಪ್ರಕಟಣೆಗೆ ಧನ ಸಹಾಯವನ್ನು ಒದಗಿಸುತ್ತಿದೆ.
ಶಿಕ್ಷಣ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕನ್ನಡ ಅಭಿವೃದ್ಧಿ ಸಮಿತಿಯು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕನ್ನಡ ಅಧ್ಯಯನ ವಿಭಾಗದ ಸಲಹಾ ಸಮಿತಿಯಾಗಿದೆ.
ಕರ್ನಾಟಕದ ಎಲ್ಲಾ ತಾಂತ್ರಿಕ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡವನ್ನು ಪಠ್ಯ ವಿಷಯವನ್ನಾಗಿ ಬೋಧಿಸಬೇಕೆಂಬ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಕೆ ಮತ್ತು ಉನ್ನತ ಶಿಕ್ಷಣ ಪರಿಷತ್ತಿನ ಆದೇಶದ ಮೇರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ತನ್ನ ಎಲ್ಲ ಸ್ನಾತಕ ಪದವಿ ಕಾರ್ಯಕ್ರಮಗಳಲ್ಲಿ ಹಾಗೂ ತನ್ನ ಎಲ್ಲ ಆವರಣಗಳಲ್ಲಿ ಮೊದಲ ವರ್ಷದ ಎರಡು ಸೆಮಿಸ್ಟರ್ ಕನ್ನಡವನ್ನು ಪಠ್ಯವಿಷಯವನ್ನಾಗಿ ಬೋಧಿಸುತ್ತಿದೆ. ಕನ್ನಡೇತರ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವ್ಯಾವಹಾರಿಕ ಕನ್ನಡವನ್ನು ಕಲಿಸಲಾಗುತ್ತಿದೆ.
ಆಧ್ಯಾದೇಶ
  • ಕನ್ನಡದಲ್ಲಿ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಪಠ್ಯ ಹಾಗೂ ಪರಾಮರ್ಶನ ಗ್ರಂಥಗಳನ್ನು ಪ್ರಕಟಿಸುವುದು.
  • ರೈತರಿಗೆ, ವಿಸ್ತರಣೆ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಕೃಷಿ ಮತ್ತು ಸಂಬಂಧಿತ ವಿಷಯಗಳ ಪುಸ್ತಕಗಳನ್ನು ಪ್ರಕಟಿಸುವುದು.
  • ಕೃಷಿ ವಿಜ್ಞಾನದ ತಾಂತ್ರಿಕ ಪದಗಳ ಪದಕೋಶಗಳ ನಿರ್ಮಾಣ.
ಚಟುವಟಿಕೆಗಳು
  • ಕನ್ನಡದಲ್ಲಿ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಪಠ್ಯ ಹಾಗೂ ಪರಾಮರ್ಶನ ಗ್ರಂಥಗಳನ್ನು ಪ್ರಕಟಿಸುವುದು.
  • ಕೃಷಿ ಮತ್ತು ಸಂಬಂಧಿತ ವಿಷಯಗಳನ್ನು ಪುಸ್ತಕಗಳನ್ನು ‘ಕೃಷಿ ಜ್ಞಾನ ಭಂಡಾರ ಮಾಲಿಕೆ’ಯಡಿಯಲ್ಲಿ ಪ್ರಕಟಿಸುವುದು.
  • ಕೃಷಿ ವಿಜ್ಞಾನದ ತಾಂತ್ರಿಕ ಪದಗಳ ಪದಕೋಶಗಳ ನಿರ್ಮಾಣ ಮತ್ತು ಪ್ರಕಟಣೆ
  • ಪದಕೋಶಗಳ ನಿರ್ಮಾಣ ಹಾಗೂ ಕನ್ನಡದಲ್ಲಿ ತಾಂತ್ರಿಕ ಬರವಣಿಗೆ ಕುರಿತ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ ನಡೆಸುವುದು.
  • ಎಲ್ಲ ಸ್ನಾತಕ ಪದವಿ ಕಾರ್ಯಕ್ರಮಗಳ ಮೊದಲ ವರ್ಷದ ಎರಡು ಸೆಮಿಸ್ಟರ್ ಕನ್ನಡವನ್ನು ಪಠ್ಯವಿಷಯವನ್ನಾಗಿ ಬೋಧಿಸುವುದು. ಕನ್ನಡೇತರ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವ್ಯಾವಹಾರಿಕ ಕನ್ನಡವನ್ನು ಕಲಿಸುವುದು.
  • ವಿಶ್ವವಿದ್ಯಾನಿಲಯದ ಅನುವಾದ ಕಾರ್ಯಗಳನ್ನು ನಿರ್ವಹಿಸುವುದು.
ಬೋಧಕ ಸಿಬ್ಬಂದಿ
Dr. Ushakiran
ಡಾ. ಜಿ.ವೀರಭದ್ರಗೌಡ
ಸಹಾಯಕ ಪ್ರಾಧ್ಯಾಪಕರು (ಭಾಷೆ)
ಕನ್ನಡ ಅಧ್ಯಯನ ವಿಭಾಗ
ಜಿ.ಕೆ.ವಿ.ಕೆ., ಬೆಂಗಳೂರು-65

This email address is being protected from spambots. You need JavaScript enabled to view it.
+91-080-23330153 Ex. 373
+91-9448947100

Additional information