Directorate at a glance-kn
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವಿಸ್ತರಣಾ ನಿರ್ದೇಶನಾಲಯವು ವಿಸ್ತರಣೆಗೆ ಸಂಬಂಧಿಸಿದಂತೆ, ಶಾಸನಬದ್ದ ಪಾತ್ರವನ್ನು ಹೊಂದಿದೆ. ರೈತ ಸಮುದಾಯದ ಒಟ್ಟಾರೆ ಪ್ರಯೋಜನಕ್ಕಾಗಿ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಅಭಿವೃದ್ಧಿಪಡಿಸಿದ ವೈಜ್ಞಾನಿಕ ಕೃಷಿ ತಂತ್ರಜ್ಞಾನವನ್ನು ತೆಗೆದುಕೊಂಡು ಹೋಗುವಲ್ಲಿ ವಿಸ್ತರಣಾ ಸೇವೆಯು ಮಧ್ಯಸ್ಥಿಕೆಯನ್ನು ಹೊಂದಿದೆ. ಈ ಉದಾತ್ತ ದ್ಯೇಯದ ಚಟುವಟಿಕೆಯು ರೈತರಲ್ಲಿ ಗುರುತಿಸಿರುವ ತಾಂತ್ರಿಕ ಅಂತರವನ್ನು ತಗ್ಗಿಸಲು ಸಹಕರಿಸುತ್ತದೆ. ವಿಶ್ವವಿದ್ಯಾನಿಲಯದ ಈ ಪ್ರಮುಖ ಕಾರ್ಯದ ಅಂತಿಮ ಗುರಿಯಂದರೆ, ರೈತನ ಜಮೀನಿನಲ್ಲಿನ ಉದ್ದಿಮೆಗಳನ್ನು ಏಕೀಕರಿಸಿ ಗಣನೆಗೆ ತೆಗೆದುಕೊಂಡು ಒಂದು ಘಟಕವಾಗಿ ಪರಿಗಣಿಸಿ ಸುಸ್ಥಿರವಾದ ನಿವ್ವಳ ಆದಾಯವನ್ನು ಹೆಚ್ಚಿಸುವುದಾಗಿದೆ.
ಕೃಷಿ ಮಾಹಿತಿಯನ್ನು ತಲುಪಿಸುವುದು, ರೈತರ ಮತ್ತು ವಿಸ್ತರಣಾ ಕಾರ್ಯಕರ್ತರ ತರಬೇತಿ ಮತ್ತು ಕ್ಷೇತ್ರ ಮಟ್ಟದ ಚಟುವಟಿಕೆಗಳಾದ ಪ್ರಾತ್ಯಕ್ಷಿಕೆಗಳು, ಕ್ಷೇತ್ರ ಭೇಟಿಗಳು, ಕ್ಷೇತ್ರೋತ್ಸವಗಳು, ಕ್ಷೇತ್ರ ಸಲಹಾ ಸೇವೆಗಳು ಮುಂತಾದವುಗಳ ಮೂಲಕ ಪ್ರಮುಖ ವಿಸ್ತರಣಾ ಕಾರ್ಯವನ್ನು ಸಾಧಿಸಲಾಗುತ್ತದೆ. ಈ ಚಟುವಟಿಕೆಗಳನ್ನು ನಿರ್ವಹಿಸಲು ಏಳು ಕೃಷಿ ವಿಜ್ಞಾನ ಕೇಂದ್ರಗಳು, ಎರಡು ವಿಸ್ತರಣಾ ಘಟಕಗಳು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೃಷಿ ಸಮುದಾಯವು ಅವರ ಕೃಷಿ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಲು ಮತ್ತು ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ವಿಸ್ತರಣಾ ನಿರ್ದೇಶನಾಲಯದ ಘಟಕಗಳ ಸೇವೆಯನ್ನು ಪಡೆಯಬಹುದು.
- Farm Information Unit (FIU)
- Agriculture Technology Information Centre (ATIC)
- Staff Training Unit
- State Agriculture Management & Extension Training Institute (SAMETI)-South
- Agri. Clinic & Agri. Business Centre (AC & ABC)
- Diploma in Agricultural Extension Services for Input Dealers (DAESI) programme
- Farmers Training Institute (FTI)
- Bakery & Value Addition Centre (B&VAC)
- National Agriculture Extension Programme (NAEP)
- Distance Education Unit (DEU)
- Agricultural Science Museum
- Krishi Vigyan Kendras (KVKs)
- Extension Education Units (EEU)
This email address is being protected from spambots. You need JavaScript enabled to view it.