ಜಿಕೆವಿಕೆ ಆವರಣದಲ್ಲಿ

Shri. Pape Gowda 
Dr. M. Papegowda
University Librarian
+91-80-23636234 (O)
+91-80-23330153 Extn.270
This email address is being protected from spambots. You need JavaScript enabled to view it.
 
ವಿಶ್ವವಿದ್ಯಾನಿಲಯ ಗ್ರಂಥಾಲಯವು ಕಾರ್ಯನಿರ್ವಹಿಸುವ ದಿನಗಳಂದು 12 ಗಂಟೆಗಳ ಕಾಲ ಹಾಗೂ ಶನಿವಾರ ಮತ್ತು ಭಾನುವಾರಗಳಂದು ಸೀಮಿತ ಅವಧಿಗೆ ತೆರೆದಿರುತ್ತದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಗ್ರಂಥಾಲಯದ ಸದಸ್ಯರಾಗಬಹುದು ಆದರೆ, ತಮ್ಮ ಸಂಸ್ಥೆಗಳಿಂದ ಪರಿಚಯ ಪತ್ರ ತರುವ / ನಮ್ಮ ವಿಶ್ವವಿದ್ಯಾನಿಲಯ ಗ್ರಂಥಾಲಯದ ಐ.ಡಿ. ಕಾರ್ಡ್ ಒದಗಿಸಿದ ಹೊರಗಿನ ಅಧಿಕೃತ ವ್ಯಕ್ತಿಗಳಿಗೆ ಪುಸ್ತಕಗಳ ಪರಾಮರ್ಶನೆಗೆ ಮಾತ್ರ ಅವಕಾಶವಿರುತ್ತದೆ.
ಗ್ರಂಥಾಲಯವು ಪುಸ್ತಕಗಳ, ಪತ್ರಿಕೆಗಳ, ಮಹಾಪ್ರಬಂಧಗಳ, ವರದಿಗಳ ಮತ್ತು ಪರಾಮರ್ಶನ ಸಂಪನ್ಮೂಲಗಳ ಡೇಟಾಬೇಸ್ ಸಿದ್ಧಪಡಿಸಿದ್ದು ಅದು ‘ಓ.ಪಿ.ಎ.ಸಿ.’ ಮೂಲಕ ಲಭಿಸುವ ವ್ಯವಸ್ಥೆ ಮಾಡಿದೆ. ಗ್ರಂಥಾಲಯವು ತಾನು ಚಂದಾದಾರರಾಗಿರುವ ಪ್ರಸ್ತುತ ನಿಯತಕಾಲಿಕೆಗಳ, ಸಿ.ಡಿ.ಗಳ, ಆನ್-ಲೈನ್ ಪತ್ರಿಕೆಗಳ ಡೇಟಾಬೇಸ್ ಸಹ ಸಿದ್ಧಪಡಿಸಿದೆ ಹಾಗೂ ಮಹಾಪ್ರಬಂಧಗಳ ಡೇಟಾಬೇಸ್ ಡಿಜಿಟೈಸ್ ಮಾಡಿದ್ದು ಇವು ಗ್ರಂಥಾಲಯದಲ್ಲಿ ಲಭ್ಯವಿವೆ. ಎನ್.ಎ.ಆರ್.ಎಸ್. (ಇ-ಗ್ರಂಥ್) ಪ್ರಾಯೋಜನೆಯಡಿಯಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ನಿರ್ವಹಣೆಯನ್ನು ಸದೃಢಗೊಳಿಸಲು ತನ್ನ ಕೊಡುಗೆಯನ್ನು ನೀಡಿದ್ದು ಅದಕ್ಕಾಗಿ 1960ರ ಹಿಂದಿನ ಹಳೆಯ ಸಂಪನ್ಮೂಲಗಳನ್ನು ಡಿಜಿಟೈಸ್ ಮಾಡಲು ಗ್ರಂಥಾಲಯ ಕಟ್ಟಡದಲ್ಲಿ ಒಂದು ಕಾರ್ಯಸ್ಥಾನವನ್ನು ಸ್ಥಾಪಿಸಿದೆ. ಬೋಧಕರ, ವಿದ್ಯಾರ್ಥಿಗಳ ಹಾಗೂ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಇತರರ ಅನುಕೂಲಕ್ಕಾಗಿ ಕೃಷಿಗೆ ಸಂಬಂಧಿಸಿದ ಎಲ್ಲಾ ವೀಡಿಯೋಗಳ, ವೀಡಿಯೋ ಉಪನ್ಯಾಸಗಳ ಮತ್ತು ಸಂಬಂಧಿಸಿದ ದೃಶ್ಯ ವಸ್ತುಗಳನ್ನು ಹೊಂದಿರುವ ವೀಡಿಯೋ ಗ್ರಂಥಾಲಯವೊಂದನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಸಹ ಗ್ರಂಥಾಲಯವು ಕೈಗೊಂಡಿದೆ. ಆರ್.ಎಫ್.ಐ.ಡಿ. ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಅದರಿಂದ ಸದಸ್ಯರು ಸುಲಭವಾಗಿ ಪುಸ್ತಕಗಳನ್ನು ಕೊಂಡೊಯ್ದು ಹಿಂದಿರುಗಿಸಬಹುದು. ಇತ್ತೀಚಿಗೆ ಗ್ರಂಥಾಲಯವು ಸೋಲ್ ನಿಂದ ಕೋಹಾಗೆ ಬದಲಾವಣೆಗೊಂಡಿದ್ದು ಈ ಪದ್ಧತಿಯಲ್ಲಿ ಸಾಕಷ್ಟು ಅನುಕೂಲಗಳಿವೆ. ಹಾಗಾಗಿ ವಿಶ್ವವಿದ್ಯಾನಿಲಯ ಗ್ರಂಥಾಲಯವು ಉತ್ತಮ ಮಾಹಿತಿ ಸೇವೆಗಳನ್ನು ಸಮುದಾಯದ ಅವಶ್ಯಕತೆಗಳಿಗನುಸಾರ ಒದಗಿಸಲು ಬಹಳಷ್ಟು ಹೊಸ ತಂತ್ರಜ್ಞಾನಗಳನ್ನು ಅನುಷ್ಠಾನಗೊಳಿಸಿದೆ ಹಾಗೂ ಇನ್ನೂ ಮುಂದೆಯೂ ಅನುಷ್ಠಾನಗೊಳಿಸುತ್ತದೆ.
ಲೈಬ್ರರಿ ಸಮಯಗಳು
ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 8.30ರಿಂದ ಮಧ್ಯರಾತ್ರಿ 12.00ರವರೆಗೆ
ಶನಿವಾರ ಬೆಳಿಗ್ಗೆ 8.30ರಿಂದ ಸಂಜೆ 6.00ರವರೆಗೆ
ಭಾನುವಾರ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ

ಗ್ರಂಥಾಲಯವು ಸರ್ಕಾರದ ರಜೆದಿನಗಳಂದು ಮುಚ್ಚಿರುತ್ತದೆ

  • ಕನ್ನಡ ವಿಭಾಗ:ಕನ್ನಡ ಸಾಹಿತ್ಯಕ್ಕಾಗಿ ಗ್ರಂಥಾಲಯವು ಪ್ರತ್ಯೇಕ ವಿಭಾಗವನ್ನು ಹೊಂದಿದೆ. ಈ ವಿಭಾಗದಲ್ಲಿ ಓದುಗರ ಅನುಕೂಲಕ್ಕಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಇತರ ಪ್ರಕಾಶಕರು ಪ್ರಕಟಿಸಿರುವ ಕನ್ನಡ ಪುಸ್ತಕಗಳನ್ನು ಎರವಲು ಪಡೆಯುವ ವಿಭಾಗದಲ್ಲಿ ಹಾಗೂ ಪರಾಮರ್ಶನ ವಿಭಾಗದಲ್ಲಿ ಇರಿಸಲಾಗಿದೆ.
  • ಸಂಶೋಧನಾ ಕೋಣೆ- ಒಂದು ವಿಶಿಷ್ಟ ಆಸನ ಸೌಲಭ್ಯ:
    ವಿಶ್ವವಿದ್ಯಾನಿಲಯದ ಕೇಂದ್ರ ಗ್ರಂಥಾಲಯವು 10x10 ಚದರ ಅಡಿಯ, ಕುರ್ಚಿ, ಮೇಜು, ಫ್ಯಾನ್ ಹಾಗೂ ಉತ್ತಮ ಬೆಳಕಿನ ಸೌಲಭ್ಯ ಹೊಂದಿರುವ ಹಾಗೂ ಬೀಗ ಕೀಲಿಯ ವ್ಯವಸ್ಥೆ ಹೊಂದಿರುವ 40 ಸಂಶೋಧನಾ ಕೋಣೆಗಳನ್ನು ಹೊಂದಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸಂಶೋಧನಾ ಕೋಣೆಗಳ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಮಹಾಪ್ರಬಂಧ ಬರೆಯುವುದು, ವಿಶ್ಲೇಷಣೆ ಹಾಗೂ ಪರಾಮರ್ಶನ ಕಾರ್ಯಗಳನ್ನು ಇತರ ವಿದ್ಯಾರ್ಥಿಗಳ ಅಡಚಣೆಯಿಲ್ಲದೆ ಅತ್ಯಂತ ಉತ್ತಮ ವಾತಾವರಣದಲ್ಲಿ ನೆರವೇರಿಸಿಕೊಳ್ಳಬಹುದು. ಈ ಸೌಲಭ್ಯವನ್ನು ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೊದಲು ಬಂದವರಿಗೆ ಆದ್ಯತೆಯ ಪದ್ಧತಿಯಲ್ಲಿ ಒದಗಿಸಲಾಗುತ್ತಿದೆ.
  • ಕಂಪ್ಯೂಟರ್ ಪ್ರಯೋಗಾಲಯ:
    ಉಚಿತ ಅಂತರ್ಜಾಲ ಸೌಲಭ್ಯದ ಗಣಕಯಂತ್ರ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯದಲ್ಲಿ ಆಧುನಿಕ ಕಾರ್ಯಸ್ಥಾನಗಳು ಮತ್ತು ಉಚಿತ ವೈ-ಫೈ ಸೌಲಭ್ಯ ಹೊಂದಿರುವ 60 ವಿದ್ಯಾರ್ಥಿಗಳು ಏಕಕಾಲಕ್ಕೆ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ 60 ಗಣಕಯಂತ್ರಗಳಿವೆ. ವಿದ್ಯಾರ್ಥಿಯು ಇ-ಪತ್ರಿಕೆಗಳನ್ನು ಪರಾಮರ್ಶಿಸಲು ಮತ್ತು ಮೇಲ್ ವೀಕ್ಷಿಸಲು ಅಂತರ್ಜಾಲ ಸೌಲಭ್ಯ ಬಳಸಿಕೊಳ್ಳಬಹುದು.
  • ವೀಡಿಯೋ ಗ್ರಂಥಾಲಯ :
    ವಿದ್ಯಾರ್ಥಿಗಳ ಹಾಗೂ ಬೋಧಕ ಸಿಬ್ಬಂದಿಯ ಅನುಕೂಲಕ್ಕಾಗಿ ಗ್ರಂಥಾಲಯವು ಅವಶ್ಯಕ ಸ್ವಯಂಚಾಲನಾ ಉಪಕರಣಗಳು, ಪೀಠೋಪಕರಣಗಳನ್ನು ಪಡೆದುಕೊಂಡು ವೀಡಿಯೋ ಗ್ರಂಥಾಲಯವನ್ನು ಸಜ್ಜುಗೊಳಿಸಿದೆ. ವೀಡಿಯೋ ಗ್ರಂಥಾಲಯವು ವಿದ್ಯಾರ್ಥಿಗಳಿಗೆ/ಬೋಧಕ ಸಿಬ್ಬಂದಿಗೆ ನೇರ ಬಿತ್ತರಿಸುವ ಉಪನ್ಯಾಸ ಸಮಾವೇಶಗಳನ್ನು ಆಲಿಸಲು/ಅವುಗಳಲ್ಲಿ ಭಾಗವಹಿಸಲು ಅವಕಾಶ ಒದಗಿಸುತ್ತದೆ ಹಾಗೂ ರೆಕಾರ್ಡ್ ಆದ ವೀಡಿಯೋವನ್ನು ಸರ್ವರ್ ಗೆ ಅಪ್ ಲೋಡ್ ಮಾಡುವುದರಿಂದ ನಂತರವೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವೀಕ್ಷಿಸಬಹುದಾಗಿದೆ.
  • ಆರ್.ಎಫ್.ಐ.ಡಿ. ತಂತ್ರಜ್ಞಾನ:
    ಕೇಂದ್ರ ಗ್ರಂಥಾಲಯದಲ್ಲಿ ಆರ್.ಎಫ್.ಐ.ಡಿ. ತಂತ್ರಜ್ಞಾನವನ್ನು (ರೇಡಿಯೊ ಫ್ರೀಕ್ವೆನ್ಸಿ ಗುರುತಿಸುವ ತಂತ್ರಜ್ಞಾನ) ದಾಸ್ತಾನು ಪರಿಶೀಲನೆ, ಆಸ್ತಿ ನಿರ್ವಹಣೆ ಮತ್ತು ಸ್ವಯಂ ಚೆಕ್ ಇನ್ ಮತ್ತು ಚೆಕ್ ಔಟ್ ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗಿದೆ.
ಪುಸ್ತಕಗಳು (ಹಿಂದಿನ ಸಂಪುಟಗಳನ್ನು ಒಳಗೊಂಡಂತೆ) 1,52,063
ಕರಪತ್ರಗಳು 11,032
ಮಹಾಪ್ರಬಂಧಗಳು/ಪ್ರೌಢಪ್ರಬಂಧಗಳು 10,465
ವರದಿಗಳು 17,920
ಮೈಕ್ರೋಫಿಲಂಗಳು 68
ಮೈಕ್ರೋಫಿಶ್ 167
ನಕ್ಷೆಗಳು 78
ಸಿ.ಡಿ. ರಾಮ್/ಡಿ.ವಿ.ಡಿ.ಗಳು 293
ಒಟ್ಟು 1,92,086
'ಎನ್.ಎ.ಆರ್.ಎಸ್. (ಇ-ಗ್ರಂಥ್) ಅಡಿಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ನಿರ್ವಹಣೆಯನ್ನು ಸದೃಢಗೊಳಿಸುವುದು'
ಒಂದು ರಾಷ್ಟ್ರೀಯ ಕೃಷಿ ನಾವೀನ್ಯತೆ ಪ್ರಾಯೋಜನೆ (ಎನ್.ಎ.ಐ.ಪಿ.), ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಭಾರತೀಯ ಕೃಷಿ ಅನುಸಂಧಾನ ಪರಿಷತ್) ಭಾಗ-1ರ ಉಪ ಪ್ರಾಯೋಜನೆಯಾಗಿದೆ. ಭಾರತದಲ್ಲಿನ ರಾಷ್ಟ್ರೀಯ ಕೃಷಿ ಸಂಶೋಧನೆ ವ್ಯವಸ್ಥೆಯು (ಎನ್.ಎ.ಆರ್.ಎಸ್.) ಕೃಷಿ ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ವಿಶ್ವವಿದ್ಯಾನಿಲಯಗಳನ್ನು ಒಳಗೊಂಡಿರುತ್ತದೆ.
ಅದು ಓ.ಪಿ.ಎ.ಸಿ. ಒಳಗೊಂಡಂತೆ 12 ವಿವಿಧ ಸಂಶೋಧನಾ ಸಂಸ್ಥೆಗಳ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳ ಪ್ರಮುಖ ಸಾಂಸ್ಥಿಕ ಭಂಡಾರ, ಅಪರೂಪದ ಪುಸ್ತಕಗಳು ಮತ್ತು ಹಳೆಯ ಪತ್ರಿಕೆಗಳನ್ನೊಳಗೊಂಡ ಗ್ರಂಥಾಲಯ ಸಂಪನ್ಮೂಲಗಳನ್ನು ಅಂತರ್ಜಾಲದ ಮೂಲಕ ಎನ್.ಎ.ಆರ್.ಎಸ್. ಅಡಿಯಲ್ಲಿ ಆನ್ ಲೈನ್ ಕಂಪ್ಯೂಟರ್ ಲೈಬ್ರರಿ ಸೆಂಟರ್ (ಒ.ಸಿ.ಎಲ್.ಸಿ.) ಪಾಲುದಾರಿಕೆಯಲ್ಲಿ ಸಾರ್ವಜನಿಕವಾಗಿ ಲಭಿಸುವಂತೆ ಮಾಡುತ್ತದೆ.
ಪ್ರಾಯೋಜನೆಯ ಉದ್ದೇಶಗಳು:
  • ಎಲ್ಲಾ 12 ಗ್ರಂಥಾಲಯ ಸಂಪನ್ಮೂಲಗಳ ಆನ್ ಲೈನ್ ಕಂಪ್ಯೂಟರ್ ಗ್ರಂಥಾಲಯ ಕೇಂದ್ರ (ಒ.ಸಿ.ಎಲ್.ಸಿ.) ಪಾಲುದಾರಿಕೆಯಲ್ಲಿ "ಭಾರತೀಯ ಕೃಷಿ ಸಂಶೋಧನಾ ಗ್ರೂಪ್ ಕ್ಯಾಟಲಾಗ್" ಅಡಿಯಲ್ಲಿ ಆನ್ ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್ (ಒ.ಪಿ.ಎ.ಸಿ.) ರಚಿಸುವುದು.
  • ಅಪರೂಪದ ಪುಸ್ತಕಗಳು ಮತ್ತು ಹಳೆಯ ಪತ್ರಿಕೆಗಳನ್ನೊಳಗೊಂಡಂತೆ ಪ್ರಮುಖ ಸಾಂಸ್ಥಿಕ ಭಂಡಾರವನ್ನು (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಗಳಿಗೆ ಸೀಮಿತವಾಗಿರುವಂತೆ) ಡಿಜಿಟೈಸ್ ಗೊಳಿಸಿ ಅವುಗಳನ್ನು ಎನ್.ಎ.ಆರ್.ಎಸ್. ಅಡಿಯಲ್ಲಿ ಮುಕ್ತವಾಗಿ ಲಭಿಸುವಂತೆ ಮಾಡುವುದು.
  • ಗ್ರಂಥಾಲಯ ಮತ್ತು ಮಾಹಿತಿ ನಿರ್ವಹಣೆ ವ್ಯವಸ್ಥೆಯನ್ನು ಸದೃಢಗೊಳಿಸುವುದು (ಎನ್.ಎ.ಆರ್.ಎಸ್.ನ ಎಲ್ಲಾ ಗ್ರಂಥಾಲಯಗಳಿಗೆ ಮುಕ್ತವಾಗಿದೆ).
ಡಿಜಿಟೈಜೇಶನ್ ಗಾಗಿ ದಾಖಲೆಗಳು:
ಈ ಮುಂದಿನ ದಾಖಲೆಗಳನ್ನು ಡಿಜಿಟೈಜೇಶನ್ ಗಾಗಿ ಪರಿಗಣಿಸಲಾಗುವುದು
  • ಸಂಸ್ಥೆಯ ಸ್ವಂತ ಪ್ರಕಟಣೆಗಳು
  • ಲೇಖಕರ ಪ್ರಕಟಣೆಗಳು (ಮರುಮುದ್ರಣಗಳು, ಪೂರ್ವಮುದ್ರಣಗಳು ಮುಂತಾದವು)
  • ಭಾರತೀಯ ಪತ್ರಿಕೆಗಳು (ಪ್ರಕಾಶಕರ / ಸಂಘದ ಕಾಪಿರೈಟ್ ಅನುಮತಿಯೊಂದಿಗೆ)
  • ಅಪರೂಪದ ಪುಸ್ತಕಗಳು (50 - 60 ವರ್ಷ ಹಳೆಯದಾದ)
  • ಮಹಾಪ್ರಬಂಧಗಳು
  • ವರದಿಗಳು
  • ಚಂದಾದಾರರಾಗಿರುವ ವಿದೇಶಿ ಪತ್ರಿಕೆಗಳು (ಹಳೆಯ ಸಂಚಿಕೆಗಳು)
ವಿಶ್ವವಿದ್ಯಾನಿಲಯವು ಇ-ಗ್ರಂಥ್ ಪ್ರಾಯೋಜನೆಯಡಿ ಆನ್ ಲೈನ್ ಗಣಕಯಂತ್ರ ಗ್ರಂಥಾಲಯ ಕೇಂದ್ರದ (ಒ.ಸಿ.ಎಲ್.ಸಿ.) (ವರ್ಲ್ಡ್ ಕ್ಯಾಟ್) ಪಾಲುದಾರರಾಗಿದೆ. ವರ್ಲ್ಡ್ ಕ್ಯಾಟ್ ನ ಸಹಾಯದಿಂದಾಗಿ ನಮ್ಮ ಬಳಕೆದಾರರಿಗೆ ಜಗತ್ತಿನಾದ್ಯಂತವಿರುವ 72,000 ಗ್ರಂಥಾಲಯಗಳಲ್ಲಿನ 200 ಮಿಲಿಯನ್ ದಾಖಲೆಗಳು ಲಭ್ಯವಿರುತ್ತವೆ. ಈ ಪ್ರಾಯೋಜನೆಯಡಿಯಲ್ಲಿ ಸುಮಾರು 1000+ ಗ್ರಂಥಾಲಯ ಕ್ಯಾಟಲಾಗ್ ದಾಖಲೆಗಳನ್ನು ವರ್ಲ್ಡ್ ಕ್ಯಾಟ್ ಗೆ ಸೇರಿಸಲಾಗಿದೆ, 38,067 ವಿಶ್ವವಿದ್ಯಾನಿಲಯ ಗ್ರಂಥಾಲಯ ದಾಖಲೆಗಳ ಶೀರ್ಷಿಕೆಗಳನ್ನು ವರ್ಲ್ಡ್ ಕ್ಯಾಟ್ ಗೆ ಟ್ಯಾಗ್ ಮಾಡಲಾಗಿದೆ ಮತ್ತು 8,64,000 ಪುಟಗಳನ್ನು ಸ್ಕ್ಯಾನ್ ಮಾಡಿ ಪಿ.ಡ.ಎಫ್.-ಎ ನಮೂನೆಗೆ ರೂಪಾಂತರಿಸಿ ವೆಬ್ ತಾಣಕ್ಕೆ ಅಪ್ ಲೋಡ್ ಮಾಡಲು ಲೀಡ್ ಸೆಂಟರ್ ಗೆ ಒದಗಿಸಲಾಗಿದೆ.
"ಇ-ಗ್ರಂಥ್" ಪ್ರಾಯೋಜನಾ ತಂಡ

"ಇ-ಗ್ರಂಥ್" ಪ್ರಾಯೋಜನೆ ಡಿಜಿಟೈಜೇಶನ್ ತಂಡ
    2007ರಿಂದೀಚೆಗೆ ವಿಶ್ವವಿದ್ಯಾನಿಲಯ ಗ್ರಂಥಾಲಯವು ಹಲವಾರು ಆನ್ ಲೈನ್ ಪತ್ರಿಕೆಗಳು, ಆಫ್ ಲೈನ್ ಡೇಟಾಬೇಸ್ ಗಳು, ಇ-ಪುಸ್ತಕಗಳು ಮತ್ತು ಇ-ಪತ್ರಿಕೆಗಳಿಗೆ ಚಂದಾದಾರರಾಗಿದೆ. ಇದರ ಜೊತೆಗೆ ಎನ್.ಎ.ಐ.ಪಿ. ಕಾರ್ಯಕ್ರಮದಡಿಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೃಷಿ ಮತ್ತು ಸಂಬಂಧಿತ ವಿಷಯಗಳ 1706 ಪೂರ್ಣ ಪಠ್ಯ ಪತ್ರಿಕೆಗಳ ಲಭ್ಯತೆಯನ್ನು ಒದಗಿಸುತ್ತಿದೆ.
  • ಪುಸ್ತಕ ಎರವಲು ಸೌಲಭ್ಯಗಳು:- ಪುಸ್ತಕ ವಿತರಣೆ ಮತ್ತು ಎರವಲು ಒಳಗೊಂಡಂತೆ ಎಲ್ಲಾ ಗ್ರಂಥಾಲಯ ಚಟುವಟಿಕೆಗಳನ್ನು ಬಾರ್ ಕೋಡ್ ಮಾಡಲಾಗಿದೆ. ವಿಶ್ವವಿದ್ಯಾನಿಲಯ ಗ್ರಂಥಾಲಯದ ಎಲ್ಲ ಸದಸ್ಯರಿಗೂ ಭಾವಚಿತ್ರ ಹಾಗೂ ಇಲೆಕ್ಟ್ರಾನಿಕ್ ಬಾರ್ ಕೋಡ್ ಹೊಂದಿರುವ ಸದಸ್ಯತ್ವ ಕಾರ್ಡ್ ನೀಡಲಾಗುತ್ತದೆ. ಬಳಕೆದಾರರಿಗೆ ಪುಸ್ತಕಗಳನ್ನು ಕಂಪ್ಯೂಟರ್ ವ್ಯವಸ್ಥೆಯ ಮೂಲಕ ವಿತರಿಸಲಾಗುತ್ತದೆ ಹಾಗೂ ಬಳಕೆದಾರರು ಆತನ/ಆಕೆಯ ಸದಸ್ಯತ್ವ ಮಾಹಿತಿಯನ್ನು ಮತ್ತು ಆತನ/ಆಕೆಯ ಖಾತೆಯನ್ನು ಆನ್ ಲೈನ್ ನಲ್ಲಿ ನೋಡಬಹುದು.
  • ಪ್ರಸ್ತುತ ನಿಯತಕಾಲಿಕೆಗಳ ಡೇಟಾಬೇಸ್:- ಇತ್ತೀಚಿನ ವೈಜ್ಞಾನಿಕ ಮಾಹಿತಿಯನ್ನು ಬಳಕೆದಾರರಿಗೆ ಒದಗಿಸುವ ಸಲುವಾಗಿ, ಗ್ರಂಥಾಲಯವು 49 ವಿದೇಶಿ ನಿಯತಕಾಲಿಕೆಗಳನ್ನೊಳಗೊಂಡಂತೆ 294 ನಿಯತಕಾಲಿಕೆಗಗಳನ್ನು (ಮುದ್ರಣ) ತರಿಸುತ್ತಿದೆ.
  • ಆನ್-ಲೈನ್ ಇತ್ತೀಚಿನ ಮಾಹಿತಿ ತಿಳುವಳಿಕೆ ಸೇವೆ:- ವಿಶ್ವವಿದ್ಯಾನಿಲಯ ಗ್ರಂಥಾಲಯಕ್ಕೆ ಸೇರ್ಪಡೆಯಾಗುವ ಹೊಸ ಪುಸ್ತಕಗಳು, ಪತ್ರಿಕೆಗಳು, ಮಹಾಪ್ರಬಂಧ ವರದಿಗಳು ಮತ್ತು ಇತರ ಮಾಹಿತಿಯನ್ನು ಗ್ರಂಥಾಲಯವು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮತ್ತು ಬೋಧಕರಿಗೆ ಇ-ಮೇಲ್ ಮೂಲಕ ತಿಳಿಸಲಾಗುವುದು ಹಾಗೂ ಇದನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವೆಬ್ ತಾಣದ ಮೂಲಕವೂ ತಿಳಿಯಬಹುದು.
  • ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನಾನ್-ಕ್ರೆಡಿಟ್ ಕೋರ್ಸ್:- ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬಳಕೆದಾರರು ಗ್ರಂಥಾಲಯದಲ್ಲಿನ ಸಂಪನ್ಮೂಲಗಳನ್ನು ಹೇಗೆ ಪಡೆದು ಬಳಸಿಕೊಳ್ಳಬಹುದೆನ್ನುವುದರ ಕುರಿತಂತೆ ವಿಶ್ವವಿದ್ಯಾನಿಲಯ ಗ್ರಂಥಾಲಯವು 2010ರಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಶೈಕ್ಷಣಿಕ ನಿಬಂಧನೆಗಳನುಸಾರ "ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೋರ್ಸ್ PGS501 (0+1) ಎಂಬ ಕಡ್ಡಾಯದ ನಾನ್-ಕ್ರೆಡಿಟ್ ಕೋರ್ಸ್" ನಡೆಸುತ್ತಿದೆ.
  • ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಬ್ಯಾಂಕ್:- ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಪ್ರತ್ಯೇಕ ಪಠ್ಯಪುಸ್ತಕ ಬ್ಯಾಂಕ್ ಇದೆ. ಈ ಬ್ಯಾಂಕ್ ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಸೆಮಿಸ್ಟರ್ ಗಳಿಗೆ ಪರಾಮರ್ಶನೆಗಾಗಿ ಪುಸ್ತಕಗಳನ್ನು ವಿತರಿಸುತ್ತದೆ. ಪಠ್ಯ ಪುಸ್ತಕ ಬ್ಯಾಂಕ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಬಂಧಿತ ಕ್ಷೇತ್ರಗಳ ವಿಷಯದ 10,000 ಪುಸ್ತಕಗಳ ಸಂಗ್ರಹವನ್ನು ಹೊಂದಿದೆ.
  • ಅಂತರ ಗ್ರಂಥಾಲಯ ಎರವಲು:- ಓದುಗರ ಕೋರಿಕೆಯ ಮೇರೆಗೆ ಗ್ರಂಥಾಲಯದಲ್ಲಿ ಲಭ್ಯವಿಲ್ಲದಿರುವ ಪುಸ್ತಕಗಳನ್ನು ಇತರ ಸಂಸ್ಥೆಗಳಿಂದ ಎರವಲು ಪಡೆಯಬಹುದು ಹಾಗೂ ಅದೇ ರೀತಿ ಇತರ ಸಂಸ್ಥೆಗಳಿಗೆ ಇಲ್ಲಿನ ಪುಸ್ತಕಗಳನ್ನು ಎರವಲು ನೀಡಬಹುದು.
  • ರಿಪ್ರೊಗ್ರಾಫಿಕ್ ಸೇವೆಗಳು:- ಕ್ಸೆರಾಕ್ಸ್ / ಫೋಟೊಕಾಪಿ ಸೇವೆಯನ್ನು ಕಡಿಮೆ ದರದಲ್ಲಿ ದೊರೆಯುವಂತೆ ಗ್ರಂಥಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.
  • ಪರಾಮರ್ಶನ ಸೇವೆ:-ಗ್ರಂಥಾಲಯದಲ್ಲಿನ ವೃತ್ತಿಪರರು ಬಳಕೆದಾರರಿಗೆ ಗ್ರಂಥಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಗುರುತಿಸಲು ಮತ್ತು ಮಾಹಿತಿಯನ್ನು ಪ್ರಸರಿಸಲು ಸಂತೋಷದಿಂದ ಸಹಾಯ ಮಾಡಲು ಸಿದ್ಧರಿರುತ್ತಾರೆ.
  • ಬಳಕೆದಾರರ ಶಿಕ್ಷಣ:- ಮಾಹಿತಿ ಪ್ರಸರಣೆಯ ಭಾಗವಾಗಿ ಗ್ರಂಥಾಲಯ ವೃತ್ತಿಪರರು ಗ್ರಂಥಾಲಯದಲ್ಲಿ ಲಭ್ಯವಿರುವ ವಿವಿಧ ಮಾಹಿತಿ ಮೂಲಗಳನ್ನು ಸಂತೋಷದಿಂದ ವಿವರಿಸಲು ಸಿದ್ಧರಿರುತ್ತಾರೆ.
  • ಸಿ.ಸಿ.ಟಿ.ವಿ.:- ಪ್ರತಿಯೊಂದು ವಿಭಾಗಗಳ ಪರಿಣಾಮಕಾರಿ ಪರಿವೀಕ್ಷಣೆಗೆ ಬಳಕೆದಾರರ ಚಲನವಲನ ವೀಕ್ಷಿಸಲು ಹಾಗೂ ಸುರಕ್ಷತೆಯ ಕಾರಣಗಳಿಗಾಗಿ ಗ್ರಂಥಾಲಯವನ್ನು ಸಿ.ಸಿ.ಟಿ.ವಿ.ಯಿಂದ ಸಜ್ಜುಗೊಳಿಸಲಾಗಿದೆ.
2024 ಸಂಗ್ರಹಣೆಗಳು
2023 ಸಂಗ್ರಹಣೆಗಳು
2022 ಸಂಗ್ರಹಣೆಗಳು
2021 ಸಂಗ್ರಹಣೆಗಳು
2020 ಸಂಗ್ರಹಣೆಗಳು
2019 ಸಂಗ್ರಹಣೆಗಳು
2018 ಸಂಗ್ರಹಣೆಗಳು

Additional information