ರಾಷ್ಟ್ರೀಯ ಬೀಜ ಪ್ರಾಯೋಜನೆ ಚಟುವಟಿಕೆಗಳು
ಬೀಜಗಳು
ಬೀಜೋತ್ಪಾದನೆಯು ವಿಶ್ವವಿದ್ಯಾನಿಲಯದ ಒಂದು ಪ್ರಮುಖ ಕಾರ್ಯವಾಗಿದೆ. ಈ ಕಾರ್ಯವನ್ನು ಈ ಮುಂದಿನ ಸರಬರಾಜು ಸಾಧ್ಯತೆಗಳೊಂದಿಗೆ ರಾಷ್ಟ್ರೀಯ ಬೀಜ ಪ್ರಾಯೋಜನೆಯ ಮೂಲಕ ಪ್ರಮುಖವಾಗಿ ಕೈಗೊಳ್ಳಲಾಗುತ್ತಿದೆ.:
- ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಮತ್ತು ಖಾಸಗಿ ಬೀಜ ಏಜೆನ್ಸಿಗಳ ಕೋರಿಕೆಯ ಮೇರೆಗೆ ಸಂವರ್ಧಕ ಬೀಜಗಳ ಉತ್ಪಾದನೆ ಮತ್ತು ಸರಬರಾಜು.
- ಬೀಜ ಗ್ರಾಮ ಪರಿಕಲ್ಪನೆಯ ಆಧಾರದ ಮೇಲೆ ವಿಜ್ಞಾನಿ-ರೈತರ ಭಾಗವಹಿಸುವಿಕೆಯ ಬೀಜೋತ್ಪಾದನೆ ಕಾರ್ಯಕ್ರಮದಡಿಯಲ್ಲಿ ಗುಣಮಟ್ಟದ ಬೀಜಗಳ ಉತ್ಪಾದನೆ ಮತ್ತು ಸರಬರಾಜು.
- ಬೀಜ ತಂತ್ರಜ್ಞಾನ ವಿಷಯಗಳ ಕುರಿತಂತೆ ಸಂಶೋಧನೆ ಕೈಗೊಳ್ಳುವುದು.
- ಬೀಜೋತ್ಪಾದನೆ, ಸಂಸ್ಕರಣೆ, ಪರೀಕ್ಷೆ ಮತ್ತು ಸಂಗ್ರಹಣೆ ಕುರಿತಂತೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
2015-16ರ ಸಾಲಿನಲ್ಲಿ ಉತ್ಪಾದಿಸಿದ ಸಂವರ್ಧಕ ಬೀಜ ಮತ್ತು ಗುಣಮಟ್ಟ ಬೀಜ ಹಾಗೂ 2016-17ರ ಕಾರ್ಯಕ್ರಮ (ಕ್ವಿಂ.ಗಳಲ್ಲಿ)
ಕ್ರ.ಸಂ. | ಬೆಳೆ | 2015-16 | 2016-17 | ||
ಸಂವರ್ಧಕ ಬೀಜ | ಗುಣಮಟ್ಟದ ಬೀಜ | ಸಂವರ್ಧಕ ಬೀಜ | ಗುಣಮಟ್ಟದ ಬೀಜ | ||
1. | ಆಹಾರ ಧಾನ್ಯಗಳು | 95.04 | 18177 | 146.23 | 13585 |
2. | ಬೇಳೆಕಾಳುಗಳು | 59.95 | 2380 | 197.77 | 1679 |
3. | ಎಣ್ಣೆಬೀಜಗಳು | 372.7 | 146 | 137.43 | 3211 |
ಒಟ್ಟು | 527.69 | 20703 | 476.43 | 18475 | |
4. | ಕಬ್ಬು (ತೋಟಗಾರಿಕೆ ಬೆಳೆಗಳು) | 600 | |||
5. | ಬಿತ್ತನೆ ಸಾಮಗ್ರಿಗಳು (ತೋಟಗಾರಿಕೆ ಬೆಳೆಗಳು)* | 287824 | 194609 |