Campus Profile at a Glance-kn

 
ಹಿನ್ನಲೆ:ಮೈಸೂರು ರಾಜಮನೆತನದ ಕೊನೆಯ ಅರಸರಾದ ಶ್ರೀ ಜಯಚಾಮರಾಜ ಒಡೆಯರ್‌ರವರು ಜನ್ಮ ಪಡೆದ ನಿಮಿತ್ತ ಚಾಮರಾಜನಗರ ಎಂಬ ಹೆಸರು ಪಡೆದಿರುವ ಚಾಮರಾಜನಗರ ಜಿಲ್ಲೆಯು ೧೯೯೭ರ ಆಗಸ್ಟ್ ೧೫ ರಂದು ಅಸ್ತಿತ್ವಕ್ಕೆ ಬಂದಿರುತ್ತದೆ. ಇದಕ್ಕೆ ಮೊದಲು ಇದು ಮೈಸೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿತ್ತು. ಚಾಮರಾಜನಗರ ಜಿಲ್ಲೆಯು ಪ್ರಸ್ತುತ ಗುಂಡ್ಲುಪೇಟೆ, ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು ಮತ್ತು ಹನೂರು ಎಂಬ ಐದು ತಾಲ್ಲೂಕು ಕೇಂದ್ರಗಳನ್ನು ಹೊಂದಿದೆ. ಅರಿಶಿಣ, ಶುಂಠಿ, ಬಾಳೆ, ಕಬ್ಬು, ಈರುಳ್ಳಿ, ವೀಳ್ಯದೆಲೆ, ರೇಷ್ಮೆ, ರಾಗಿ, ಜೋಳ, ಮುಸಿಕಿನ ಜೋಳ, ಭತ್ತ, ಹುರುಳಿ, ತೊಗರಿ, ಅಲಸಂದೆ, ಶೇಂಗಾ, ಹತ್ತಿ, ಸೂರ್ಯಕಾಂತಿ ಇಲ್ಲಿನ ಪ್ರಧಾನ ಬೆಳೆಗಳು. ಇಲ್ಲಿಯ ವಾರ್ಷಿಕ ಮಳೆ ಪ್ರಮಾಣ ೭೦೫ಮಿ.ಮೀ ಇದ್ದು, ಏಪ್ರಿಲ್ ಯಿಂದ ಸೆಪ್ಟೆಂಬರ್ ತಿಂಗಳವರೆಗೆ ಹಂಚಿಕೆಯಾಗಿರುತ್ತದೆ, ಭೂಮಿಯು ಮರಳು ಮಿಶ್ರಿತ ಕೆಂಪು ಮತ್ತು ಮದ್ಯಮ ಕಪ್ಪುಮಣ್ಣುನಿಂದ ಕೂಡಿರುತ್ತದೆ.
ಮಹಾವಿದ್ಯಾಲಯದ ಸ್ಥಾಪನೆ: ಭೌಗೋಳಿಕವಾಗಿ ೫೬೪೮ ಚ.ಕೀ.ಮಿ ವಿಸ್ತೀರ್ಣ ಹೊಂದಿರುವ ಈ ಜಿಲ್ಲೆಯು ಮಣ್ಣು, ಕೃಷಿ ಮತ್ತು ಜೈವಿಕ ವೈವಿದ್ಯತೆಗೆ ಹೆಸರು ಪಡೆದಿರುತ್ತದೆ. ಈ ಜಿಲ್ಲೆಯನ್ನು ಕೃಷಿ ಕ್ಷೇತ್ರದಲ್ಲಿ ಸಮಗ್ರವಾಗಿ ಮುನ್ನಡೆಸುವ ಸದುದ್ದೇಶದಿಂದ ಕರ್ನಾಟಕ ಸರ್ಕಾರವು ೨೦೧೮ರಲ್ಲಿ ಹೊರಡಿಸಿದ ಆದೇಶಾನುಸಾರ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಚಾಮರಾಜನಗರ ಕೃಷಿ ಮಹಾವಿದ್ಯಾಲಯವನ್ನು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ದಿನಾಂಕ ೨೭-೦೮-೨೦೧೮ರಂದು ಉದ್ಘಾಟಿಸಿ ೨೦೧೮-೧೯ನೇ ಸಾಲಿನಿಂದ ಬಿ.ಎಸ್ಸಿ.(ಹಾರ್ಸ್ನ)ಕೃಷಿ ಪದವಿ ತರಗತಿಗಳನ್ನು ಆರಂಭಿಸಿರುತ್ತದೆ. ಪ್ರತಿ ವರ್ಷವೂ ೩೦ ರಿಂದ ೩೫ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳುತ್ತಿದ್ದು, ಪ್ರಸ್ತುತ (೨೦೨೦-೨೧ನೇ ಸಾಲಿನಲ್ಲಿ) ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಆವರಣದಲ್ಲಿ ಕೃಷಿ ಮಹಾವಿದ್ಯಾಲಯದ ಜೊತೆಗೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಖಿಲ ಭಾರತ ಸುಸಂWಟಿತ ಸಂಶೋಧನಾ ಪ್ರಾಯೋಜನೆಗಳಾದ ಜೋಳ ಮತ್ತು ಹತ್ತಿ ಬೆಳೆಯ ಘಟಕಗಳಿದ್ದು ಇಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕಾ ಸೌಲಭ್ಯಗಳ ಲಭ್ಯತೆಯಿದೆ.
ಪದವಿಯ ಅವಧಿ ಹಾಗೂ ಪ್ರವೇಶ ನಿಯಮ: ಬಿ.ಎಸ್ಸಿ(ಹಾರ್ಸ )ಕೃಷಿಯು ಎಂಟು ಸೆಮಿಸ್ಟರ್ಗಳನ್ನೊಳಗೊಂಡ ನಾಲ್ಕು ವರ್ಷಗಳ ಪದವಿಯಾಗಿದ್ದು, ಪ್ರವೇಶದ ನಿಯಮಗಳು ಸ್ಪಷ್ಟವಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (I.ಅ.ಂ.ಖ) ನಿಬಂಧನೆಗೆ ಒಳಪಟ್ಟಿರುತ್ತವೆ. ಈ ಪದವಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಪಿ.ಯು ಮಂಡಳಿಯವರು ನಡೆಸುವ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ‘ಪಿ.ಸಿ.ಎಂ.ಬಿ’ ಐಚ್ಚಿಕ ವಿಷಯಗಳನ್ನು ತೆಗೆದುಕೊಂಡಿರಬೇಕು. ಕರ್ನಾಟಕ ಸರ್ಕಾರದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿ.ಇ.ಟಿ.) ಬರೆದಿರಬೇಕು, ಸಿ.ಇ.ಟಿ ರ್ಯಾಂ ಕ್ ಆದಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗುತ್ತದೆ. ಗ್ರಾಮೀಣ ಹಿನ್ನಲೆವುಳ್ಳ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಶೇ.೪೦ರವರೆಗೆ ಮೀಸಲಾತಿ ಇರುತ್ತದೆ. ಕೃಷಿ ಮತ್ತು ಕೃಷಿಗೆ ಸಂಬAದಿಸಿದ ಎಲ್ಲಾ ವಿಷಯಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಥಿಯರಿ ಮತ್ತು ಪ್ರಾಯೋಗಿಕವಾಗಿ ಕಲಿಯಲು ಅವಕಾಶವನ್ನು ಒದಗಿಸುವುದು, ಪದವಿಯಲ್ಲಿ ಕೃಷಿ ಮತ್ತು ಕೃಷಿ ಸಂಬAದಿತ ವಿಷಯಗಳ ತಂತ್ರಜ್ಞಾನದ ಅಭಿವೃದ್ಧಿಯ ಗತಿಯನ್ನು ಮತ್ತು ತಜ್ಞರ ಬೇಡಿಕೆಗಳನ್ನು ಪೂರೈಸುವ ಹಾಗೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಕೃಷಿಯಲ್ಲಿ ಸಂಶೋಧನೆಗೆ ಮತ್ತು ಉನ್ನತ ಶಿಕ್ಷಣಕ್ಕೆ ಅನುವಾಗುವಂತೆ ಶಿಷ್ಯವೇತನ ಪಡೆಯಲು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು.
ಶೈಕ್ಷಣಿಕ ಕಾರ್ಯಕ್ರಮ ಮತ್ತು ಪಠ್ಯಕ್ರಮ : ಈ ಪದವಿಗೆ ದಾಖಲಾದ ವಿದ್ಯಾರ್ಥಿಯು ಕಡ್ಡಾಯವಾಗಿ ೨೨ ವಿಷಯಗಳನ್ನು ೧೮೩ ನಿಯಮಿತ ಕ್ರೆಡಿಟ್ ಅವಧಿಯಲ್ಲಿ ಪೂರೈಸಬೇಕಾಗುತ್ತದೆ. ಉತ್ತೀರ್ಣ ಹೊಂದಲು ೧೦.೦೦ಕ್ಕೆ ಕನಿಷ್ಠ ೬.೦೦ ಅಂಕಗಳನ್ನು (ಔಉPಂ) ಪಡೆಯಬೇಕು. ಹಸಿರು ಧಾರಣೆ ಎಂಬ ಕಾರ್ಯಕ್ರಮವನ್ನು ಮಹಾವಿದ್ಯಾಲಯವು ಅಳವಡಿಸಿಕೊಂಡಿದ್ದು ಪದವಿಯ ಮೊದಲ ವರ್ಷದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ವಿವಿಧ ಪ್ರಭೇಧದ ಒಂದೊAದು ಸಸಿ/ಗಿಡಗಳನ್ನು ನೆಟ್ಟು ಅವುಗಳನ್ನು ನಾಲ್ಕು ವರ್ಷಗಳ ಕಾಲ ಪೋಷಿಸಿ ನಿರ್ವಹಿಸುವ ಜವಾಬ್ದಾರಿಯನ್ನು ನೀಡಲಾಗುತ್ತದೆ ಮತ್ತು ಅಂತಿಮವಾಗಿ ಪದವಿಯನ್ನು ಮುಗಿಸಿದಾಗ ಪದವಿ ಪತ್ರದ ಜೊತೆ ಆ ವಿದ್ಯಾರ್ಥಿ ಮತ್ತು ಅವರು ಪೋಷಿಸಿದ ಗಿಡದ ಭಾವಚಿತ್ರವನ್ನೊಳಗೊಂಡ ಹಸಿರು ಧಾರಣೆ ಪ್ರಮಾಣ ಪತ್ರವನ್ನು ನೀಡಲಾಗುವುದು.
ಗ್ರಾಮೀಣ ಉದ್ಯಮಶೀಲತೆ ತಿಳುವಳಿಕಾ ಅಭಿವೃದ್ಧಿ ಯೋಜನೆÉ (Student “READY” Program)
ಅಂತಿಮ ವರ್ಷದ ಬಿ.ಎಸ್ಸಿ.(ಹಾರ್ಸ್ಷ)ಕೃಷಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಹಾಗೂ ಗ್ರಾಮೀಣ ಕೃಷಿ ಅನುಭವ ನೀಡುವುದಕ್ಕಾಗಿ ೭ನೇ ಸೆಮಿಸ್ಟರ್‌ನಲ್ಲಿ ಪ್ರಾಯೋಗಿಕ ಕಲಿಕಾ ಕಾರ್ಯಕ್ರಮ ಹಾಗೂ ಎಂಟನೇ ಸೆಮಿಸ್ಟರ್‌ನಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವನ್ನು (ಖಂWಇ) ನಡೆಸಲಾಗುತ್ತದೆ. ಅನುಭವಾತ್ಮಕ ಕಲಿಕಾ ಕಾರ್ಯಕ್ರಮದಡಿಯಲ್ಲಿ “ಕಲಿಕೆಯಿಂದ ಗಳಿಕೆ” (ಊಔಖಿ) ಯ ಗುರಿಯನ್ನು ಹೊಂದಿರುವ ಪಠ್ಯಕ್ರಮಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಪ್ರಾಯೋಗಿಕ ಕಲಿಕೆಯೊಂದಿಗೆ ಆದಾಯವನ್ನು ಗಳಿಸಬಹುದಾಗಿರುತ್ತದೆ. ಎರೆಹುಳು ಗೊಬ್ಬರ ತಯಾರಿಕೆ, ಅಣಬೆ ಉತ್ಪಾದನೆ, ವಿವಿಧ ಬೆಳೆ ಬೀಜೋತ್ಪಾದನೆ, ರೇಷ್ಮೆಹುಳು ಸಾಕಾಣಿಕೆ, ವಾಣಿಜ್ಯ ಬೆಳೆಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಇತರೆ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆಮಾಡಿಕೊಳ್ಳಬಹುದಾಗಿರುತ್ತದೆ. ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮೂರು ತಿಂಗಳು ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ ರೈತರ ಹೊಲ, ಮನೆ, ಗದ್ದೆಗಳಲ್ಲಿ ಕೆಲಸ ಮಾಡುತ್ತಾ ರೈತರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯುವುದರ ಜೊತೆಗೆ ರೈತರಿಗೆ ಸಾಕಷ್ಟು ತರಬೇತಿ, ಪ್ರಾತ್ಯಕ್ಷಿಕೆ, ಆಂದೋಲನ ಹಾಗೂ ಕೃಷಿ ವಸ್ತು ಪ್ರದರ್ಶನಗಳನ್ನು ಏರ್ಪಾಡು ಮಾಡಿ “ನೋಡಿ ತಿಳಿ ಮಾಡಿ ಕಲಿ” ಎನ್ನುವ ವಿಸ್ತರಣಾ ತಂತ್ರಗಳನ್ನು ತಿಳಿಯುತ್ತಾರೆ.
ಕೋರ್ಸ್ ಪಠ್ಯಕ್ರಮ

ಕ್ರ.ಸಂವಿಭಾಗಗಳುವಿಷಯಗಳ ಸಂಖ್ಯೆಸಾಪ್ತಾಯಿಕ ಸಂಪರ್ಕ ಅವಧಿ
1 ಸಸ್ಯಜೀವ ರಸಾಯನಶಾಸ್ತ * 4 9
2 ಗಣಕ ವಿಜ್ಞಾನ ಮತ್ತು ಕೃಷಿ ಇರ್ನ್ಪಮೇಟಿಕ್ಸ್* 10 20
3 ಇಂಗ್ಲೀಷ್* 4 9
4 ಕೃಷಿ ಸಂಖ್ಯಾಶಾಸ್ತ* 4 8
5 ಬೇಸಾಯಶಾಸ್ತ 4 10
6 ಕೃಷಿ ಅರ್ಥಶಾಸ್ತ 4 8
7 ಕೃಷಿ ಇಂಜಿನಿಯರಿಂಗ್ 2 4
8 ಕೃಷಿ ಕೀಟಶಾಸ್ತ 1 3
9 ಕೃಷಿ ವಿಸ್ತರಣೆ 1 2
10 ಕೃಷಿ ಸೂಕ್ಷö್ಮಜೀವಶಾಸ್ತತ 3 6
11 ಪ್ರಾಣಿ ವಿಜ್ಞಾನ 2 4
12 ಜೇನು ಕೃಷಿ 2 4
13 ಬೆಳೆ ಶರೀರ ಕ್ರಿಯಾಶಾಸ್ತ 5 10
14 ಆಹಾರ ವಿಜ್ಞಾನ ಮತ್ತು ಪೋಷಣೆ 5 10
15 ಅರಣ್ಯ ಮತ್ತು ಪರಿಸರ ವಿಜ್ಞಾನ 1 3
16 ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿಶಾಸ್ತ 4 10
17 ತೋಟಗಾರಿಕೆ 2 4
18 ಸಸ್ಯ ಜೈವಿಕ ತಂತ್ರಜ್ಞಾನ 1 2
19 Sಸಸ್ಯ ರೋಗಶಾಸ್ತ 4 10
20 ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ 1 20
21 ರೇಷ್ಮೆ ಕೃಷಿ 1 20
22 ಮಣ್ಣು ವಿಜ್ಞಾನ ವiತ್ತು ಕೃಷಿ ರಸಾಯನಶಾಸ್ತ 5 7
  Total 70 183
ಹೊರೆ ರಹಿತ ಕಡ್ಡಾಯ ಕೋರ್ಸುಗಳು ಕಡ್ಡಾಯವಾಗಿ ನೋಂದಾಣಿಸಬೇಕು ಆದರೆ ಸಿ.ಜಿ.ಪಿ.ಎ/ಒ.ಜಿ.ಪಿ.ಎ. ಲೆಕ್ಕಚಾರಕ್ಕೆ ಒಳಪಡುವುದಿಲ್ಲ. (ಕ್ರ.ಸಂ-೨೫ ರಿಂದ ೩೦ ರವರೆಗೆ)
ವಿದ್ಯಾರ್ಥಿ ವೇತನಗಳು ಪ್ರತಿಭಾ ವಿದ್ಯಾರ್ಥಿ ವೇತನ, ಸಾಮಾನ್ಯ ವಿದ್ಯಾರ್ಥಿ ವೇತನ, ಭಾರತ ಸರ್ಕಾರದ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಕಲ್ಯಾಣ ನಿಧಿ, ಜಿಂದಾಲ್ ವಿದ್ಯಾರ್ಥಿ ವೇತನ ಹಾಗೂ ಇನ್ನಿತರೆ ವೇತನಗಳ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಾವಳಿಗಳಂತೆ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪಡೆದುಕೊಳ್ಳಬಹುದು.

ಕೃಷಿ ಪಧವೀದರರಿಗಿರುವ ಅವಕಾಶಗಳ
ಕೃಷಿ ಹಾಗೂ ಸಂಬAದಿತ ವಿಜ್ಞಾನ ವಿಷಯಗಳಲ್ಲಿ ಎಂ.ಎಸ್ಸಿ ಮತ್ತು ಪಿ.ಹೆಚ್.ಡಿ ಉನ್ನತ ವ್ಯಾಸಂಗ ಮಾಡಲು ವಿಪುಲ ಅವಕಾಶಗಳು.
೧. ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಇತರೆ ಸಂಸ್ಥೆಗಳ ವಿವಿಧ ಫೆಲೋಶಿಪ್‌ಗಳಾದ ಜೂನಿಯರ್ / ಸೀನಿಯರ್ ರೀಸರ್ಚ್ ಫೆಲೋಶಿಪ್‌ಗಳನ್ನು ಹಣದ ಸೌಲಭ್ಯದೊಂದಿಗೆ ಉಚಿತವಾಗಿ ಉನ್ನತ ವ್ಯಾಸಂಗವನ್ನು ದೇಶದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಮಾಡಬಹುದು.
೨. ಉನ್ನತ ವ್ಯಾಸಂಗದ ನಂತರ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ, ಸಂಶೋಧನಾ ಹಾಗೂ ವಿಸ್ತರಣಾ ಸಂಸ್ಥೆಗಳಲ್ಲಿ ವಿಜ್ಞಾನಿಗಳಾಗಿ / ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಬಹುದು.
೩. ಕರ್ನಾಟಕ ಹಾಗೂ ಭಾರತ ಸರ್ಕಾರದ ಆಡಳಿತ ಸೇವೆಗಳಾದ ಐ.ಎ.ಎಸ್, ಐ.ಪಿ.ಎಸ್, ಐ.ಎಫ್.ಎಸ್ ಕೆ.ಎ.ಎಸ್, ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬಹುದು.
೪. ಕರ್ನಾಟಕ ಸರ್ಕಾರದ ಕೃಷಿ ಹಾಗೂ ಕೃಷಿ ಸಂಬAದಿತ ಇಲಾಖೆಗಳಲ್ಲಿ ಹಾಗೂ ಬ್ಯಾಂಕ್ ಕ್ಷೇತ್ರಗಳಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬಹುದು.
೫. ಬೀಜ, ಗೊಬ್ಬರ, ಕೀಟನಾಶಕ ಕಂಪನಿಗಳಲ್ಲಿ ಹಾಗೂ ಬಹುರಾಷ್ಟಿçÃಯ ಕಂಪನಿಗಳಲ್ಲಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬಹುದು.
೬. ಕೃಷಿ ಹಾಗೂ ಸಂಬAದಿತ ಕ್ಷೇತ್ರಗಳಲ್ಲಿ ಕೃಷಿ ಉದ್ಯಮಿಗಳಾಗಿ ಸ್ವಯಂ ಉದ್ಯೋಗ ಮಾಡಬಹುದು.
೭. ಮಾದರಿ / ಮುಂದುವರಿದ ಕೃಷಿಕನಾಗಿ ರೈತರಿಗೆ ಮಾರ್ಗದರ್ಶನ ನೀಡಬಹುದು



ವಿದ್ಯಾರ್ಥಿಗಳಿಗೆ ಸೌಲಭ್ಯಗಳು
ವಿದ್ಯಾರ್ಥಿ ಸಲಹಾಗಾರರು : ಪ್ರತಿ ಐದು ವಿದ್ಯಾರ್ಥಿಗಳ ಗುಂಪಿಗೆ ಒಬ್ಬ ನುರಿತ ಪ್ರಾಧ್ಯಾಪಕರನ್ನು ಸಲಹಾಗಾರರನ್ನಾಗಿ ನೇಮಿಸಲಾಗುವುದು. ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ, ಅವರ ತಂದೆ-ತಾಯಿಗಳಿಗೆ/ ಪೋಷಕರಿಗೆ ಮಾಹಿತಿ ಹಾಗೂ ಕಾಲೇಜಿನ ಮುಖ್ಯಸ್ಥರಿಗೆ ವರದಿ ನೀಡುವುದಲ್ಲದೆ, ಆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಲಹೆ ಸೂಚನೆ ನೀಡುತ್ತಾ ಅವರನ್ನು ಸನ್ನಡತೆಯಲ್ಲಿ ಮುನ್ನಡೆಸಲು ಪ್ರೇರೇಪಿಸುತ್ತಾರೆ.

ಉದ್ಯೋಗ ಕೋಶ : ಪದವಿ ಮುಗಿಸುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಸಲುವಾಗಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಉದ್ಯೋಗ ಕೋಶ ಸ್ಥಾಪಿಸಿದ್ದು, ಪ್ರತಿ ವರ್ಷ ವಿವಿಧ ಖಾಸಗಿ ಕಂಪನಿಗಳು ಹಾಗೂ ಸಂಘ ಸಂಸ್ಥೆಗಳನ್ನು ಆಹ್ವಾನಿಸಿ ಲಿಖಿತ ಪರೀಕ್ಷೆ, ಗುಂಪು ಚರ್ಚೆ ಹಾಗೂ ಮೌಖಿಕ ಸಂದರ್ಶನಗಳ ಮುಖಾಂತರ ನಿಯಮಿತವಾಗಿ ಉದ್ಯೋಗವನ್ನು ಕಲ್ಪಿಸಲಾಗುವುದು. ಪದವಿ ಪಡೆದ ವಿದ್ಯಾರ್ಥಿಗಳು ಈ ಕೋಶದಲ್ಲಿ ತಮ್ಮ ವಿವರವನ್ನು ನೊಂದಣಿ ಮಾಡಿಸಿಕೊಂಡರೆ ಸೂಕ್ತ ಮಾರ್ಗದರ್ಶನ ಹಾಗೂ ಸಹಾಯ ದೊರೆಯುತ್ತದೆ

ಮೂಲಭೂತ ಸೌಕರ್ಯಗಳು: ಪ್ರಸ್ತುತ ಕೃಷಿ ಮಹಾವಿದ್ಯಾಲಯದಲ್ಲಿ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ನಾಲ್ಕು ತರಗತಿಗಳ ಕೊಠಡಿಗಳಿಗೆ ಎಲ್.ಸಿ.ಡಿ ಪ್ರೊಜೆಕ್ಟರ್‌ಗಳು ಹಾಗೂ ಕಂಪ್ಯೂಟರ್ ಅಳವಡಿಸಲಾಗಿದೆ. ಪ್ರಾಯೋಗಿಕ ತರಗತಿಗಳಿಗಾಗಿ ಮೂರು ಸುಸಜ್ಜಿತ ಪ್ರಯೋಗಾಲಯಗಳನ್ನು ಹಾಗೂ ಸಿಸಿ ಟಿವಿಯನ್ನೊಳಗೊಂಡ ಸಮ್ಮೇಳನಾ/ಪರೀಕ್ಷಾ ಸಭಾಂಗಣಗಳಿವೆ



ಗ್ರಂಥಾಲಯ ಮತ್ತು ಗಣಕ ಪ್ರಯೋಗಾಲಯ: ಗ್ರಂಥಾಲಯ ಮತ್ತು ಗಣಕ ಪ್ರಯೋಗಾಲಯವು ಆವರಣದಲ್ಲಿದ್ದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗಾಗಿ ವಿವಿಧ ವಿಷಯಗಳ ೧೯೯೬ ಪಠ್ಯ ಪುಸ್ತಕಗಳು ಮತ್ತು ೫ ನಿಯತಕಾಲಿಕಗಳ ಬಳಕೆ ಸೌಲಭ್ಯವಿರುತ್ತದೆ. ಗ್ರಂಥಾಲಯದಲ್ಲಿ “ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿಗಳು” ಪುಸ್ತಕಗಳು ಮತ್ತು ಗಣಕೀಕೃತ ಪ್ರತಿಗಳು ಬಳಕೆಗಾಗಿ ಇರುತ್ತವೆ. ಗ್ರಂಥಾಲಯದಲ್ಲಿ ೧೩ ಗಣಕಯಂತ್ರಗಳಿದ್ದು ಅಂತರ್ಜಾಲ ವ್ಯವಸ್ಥೆ ಕಲ್ಪಿಸಲಾಗಿದೆ. ಸೆರಾ (CERA – consortium of e – resources in agriculture) ತಂತ್ರಾAಶ ಬಳಕೆಯಲ್ಲಿದ್ದು, ಪ್ರಚಲಿತ ವಿದ್ಯಾಮಾನಗಳ, ಕೃಷಿಯಲ್ಲಿನ ಅಂಕಿ ಅಂಶಗಳ ಮತ್ತು ಕೃಷಿ ಸಂಶೋಧನಾ ಲೇಖನಗಳ/ಪುಸ್ತಕಗಳ ಕುರಿತು ಮಾಹಿತಿ ಪಡೆಯುವ ಸೌಲಭ್ಯವಿದೆ. ಇದಲ್ಲದೇ ತರಗತಿಯ ಪಠ್ಯ ವಿಷಯಗಳ ತಯಾರಿ ಮತ್ತು ಇತರೆ ಶೈಕ್ಷಣಿಕ ಸಂಬAಧಿತ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಲಭ್ಯವಿರುವ ಗಣಕಯಂತ್ರ ಮತ್ತು ಅಂತರ್ಜಾಲ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿರುತ್ತದೆ.



ವಸತಿ ನಿಲಯಗಳ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಕೃಷಿ ವಿಜ್ಞಾನ ಕೇಂದ್ರದ ಆವರದ ಸಮೀಪವಿರುವ ಬಾಡಿಗೆ ಕಟ್ಟಡದಲ್ಲಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಕೃಷಿ ವಿಜ್ಞಾನ ಕೇಂದ್ರದ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಲಯಗಳ ಅನುಕೂಲ ಮಾಡಲಾಗಿದ್ದು ಎರಡೂ ವಿದ್ಯಾರ್ಥಿನಿಲಯಗಳಲ್ಲಿ ಮಾಂಸಹಾರಿ ಹಾಗೂ ಸಸ್ಯಹಾರಗಳನ್ನೊಳಗೊಂಡ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತದೆ. ಜೊತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಆರ್,ಓ ಘಟಕವನ್ನು ಸ್ಥಾಪಿಸಲಾಗಿದೆ ಮತ್ತು ಸ್ನಾನಕ್ಕೆ ಸೋಲರ್ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಪ್ರತೇಕ ಟಿ.ವಿ, ವಾಚಾನಾಲಯ ಮತ್ತು ವ್ಯಾಯಮ ಕೊಠಡಿಗಳ ಸೌಲಭ್ಯ ನಿರ್ಮಿಸಲಾಗಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಲಯದಲ್ಲಿ ವಾಸಮಾಡುವ ವಿದ್ಯಾರ್ಥಿಗಳಿಗೆ ಕೃಷಿ ಮಹಾವಿದ್ಯಾಲಯಕ್ಕೆ ಹೋಗಿಬರಲು ವಾಹನ ಸೌಲಭ್ಯ ಒದಗಿಸಲಾಗಿದೆ.



ಕ್ರೀಡೆ ಮತ್ತು ಸಾಂಸ್ಕçತಿಕ ಚಟುವಟಿಕೆಗಳು: ಮಹಾವಿದ್ಯಾಲಯವು ವಿದ್ಯಾರ್ಥಿಗಳ ಬೌದ್ದಿಕ ಬೆಳವಣಿಗೆಗೆ ಮಾತ್ರ ಒತ್ತು ನೀಡದೆ ದೈಹಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಕೂಡ ಅವಕಾಶ ನೀಡಲಾಗಿದೆ. ದೈಹಿಕ ಶಿಕ್ಷಣ (ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ) ಮತ್ತು ರಾಷ್ಟಿçÃಯ ಸೇವಾ ಯೋಜನೆಯ (ಎನ್.ಎಸ್.ಎಸ್) ಕಾರ್ಯಕ್ರಮವನ್ನು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಲಾಗಿದೆ. ಪ್ರತಿ ವರ್ಷ ನಡೆಸುವ ಅಂತರ ಮಹಾವಿದ್ಯಾಲಯ ಹಾಗೂ ಅಂತರ ವಿಶ್ವವಿದ್ಯಾನಿಲಯಗಳ ಯುವಜನೋತ್ಸವ ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ.
ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಖೋಖೋ, ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್, ಷಟಲ್ ಬ್ಯಾಡ್‌ಮಿಟನ್, ಬಾಲ್ ಬ್ಯಾಡ್‌ಮಿಟನ್, ಕಬ್ಬಡ್ಡಿ ಹಾಗೂ ಟೇಬಲ್ ಟೆನ್ನಿಸ್ ಆಟಗಳಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ರಾಷ್ಟಿçÃಯ ಸೇವಾಯೋಜನೆಯಡಿಯಲ್ಲಿ ಪ್ರತಿ ವರ್ಷವೂ ಒಂದೊAದು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಹಳ್ಳಿಯ ಜನತೆಗೆ ಶಿಕ್ಷಣದ ಮಹತ್ವ ಹಾಗೂ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಗಿಡನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ



ಪ್ರಾಯೋಗಿಕ ಕಲಿಕೆಗಾಗಿ ಭೂ ಸೌಲಭ್ಯಗಳು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗಾಗಿ ೪೮ ಎಕರೆ ಭೂಮಿ ಲಭ್ಯವಿದ್ದು, ಇದರಲ್ಲಿ ಕೆ.ವಿ.ಕೆ, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ ಹಾಗೂ ವಿದ್ಯಾರ್ಥಿಗಳ ಪ್ರಾಯೋಗಿಕ ತಾಕುಗಳು ಇವೆ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿದ ಬೆಳೆಗಳಾದ ರಾಗಿ, ಜೋಳ, ತೊಗರಿ, ಭತ್ತ, ಅರಿಶಿಣ ಹಾಗೂ ಇತರೆ ಬೆಳೆಗಳ ಪ್ರಾಯೋಗಿಕ ತರಬೇತಿ ಪಡೆಯುತ್ತಾರೆ.

ಶೈಕ್ಷಣಿಕ ಪ್ರವಾಸ: ವತೃತೀಯ ವರ್ಷದ ಕೃಷಿ ವಿದ್ಯಾರ್ಥಿಗಳಿಗೆ ೧೫ ದಿನಗಳ ಶೈಕ್ಷಣಿಕ ಪ್ರವಾಸವನ್ನು ದೇಶದ ವಿವಿಧ ರಾಜ್ಯಗಳಿಗೆ ಏರ್ಪಡಿಸಲಾಗುತ್ತದೆ. ವಿವಿಧ ರಾಜ್ಯಗಳ ಕೃಷಿ ವಿಶ್ವವಿದ್ಯಾನಿಲಯಗಳು, ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಸಂಶೋಧನಾ ಹಾಗೂ ವಿಸ್ತರಣ ಸಂಸ್ಥೆಗಳಿಗೆ ಬೇಟಿ ನೀಡಿ ವಲಯ ಆದಾರಿತ ಕೃಷಿ ಸಂಶೋಧನೆ ಹಾಗೂ ವಿಸ್ತರಣೆಗಳ ಬಗ್ಗೆ ತಿಳಿಸಲಾಗುತ್ತದೆ. ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳ ರೈತರ ಸಾಂಸ್ಕೃತಿಕ, ಸಾಮಾಜಿಕ ಜೀವನ ಶೈಲಿಯನ್ನು ಸಹ ತಿಳಿದುಕೊಳ್ಳುತ್ತಾರೆ.

ಅಧಿಕಾರ ವರ್ಗ
1 ಡಾ.ದೊರೆಸ್ವಾಮಿ.ಸಿ ವಿಶೇಷಾಧಿಕಾರಿಗಳು (ಡೀನ್ ಕೃಷಿ)
ದೂ. 8277893972
2 ಡಾ.ಉಮಾಶಂಕರ್ ಕುಮಾರ್ ಎನ್ ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು, ಕ್ಷೇತ್ರ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಮಾರ್ಗದರ್ಶಕರು
ದೂ.. 9739337172
3 ಡಾ.ಶಶಿಕುಮಾರ್.ಸಿ ಸಹಾಯಕ ಆಡಳಿತಾಧಿಕಾರಿಗಳು
ದೂ. 9980870502
4 ಡಾ.ಶಿವರಾಯ್ ನಾವಿ ಸಹಾಯಕ ಹಣಕಾಸು ನಿಯಂತ್ರಣಾಧಿಕಾರಿಗಳು
ದೂ. 8310994948
5 ಡಾ.ಯೋಗೆಶ್.ಜಿ.ಎಸ್ ಸಹಾಯಕ ಗ್ರಂಥಪಾಲಕರು
ದೂ. 7760846678
6 ಡಾ.ಮೋಹನ್ ಕುಮಾರ್.ಎ.ಬಿ ಸಹಾಯಕ ಪರೀಕ್ಷ ನಿಯಂತ್ರಾಣಾಧಿಕಾರಿಗಳು
ದೂ.. 7760773584
7 ಡಾ.ಚಂದ್ರಶೇಖರ್.ಎಸ್.ಕಳ್ಳಿಮನಿ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ
ದೂ. 9448080285
8 ಶ್ರೀ ಮಲ್ಲಪ್ಪ ಜೆ ಮಡೋಳ್ಳಿ ಸಹಾಯಕ ಕುಲಸಚಿವರು ಮತ್ತು ನಿಲಯಪಾಲಕರು
ದೂ..8266803839
9 ಡಾ.ಬಾಪುರದ ಪೊಂಪನಗೌಡ ಕಾರ್ಯಕ್ರಮ ಅಧಿಕಾರಿ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ
ದೂ. 7406152815


ಬೋಧಕ ವರ್ಗ
1 ಡಾ.ದೊರೆಸ್ವಾಮಿ.ಸಿ ಪ್ರಾಧ್ಯಾಪಕರು (ರೇಷ್ಮೆ ಕೃಷಿ)
2 ಡಾ.ಉಮಾಶಂಕರ್ ಕುಮಾರ್ ಎನ್ ಸಹ ಪ್ರಾಧ್ಯಾಪಕರು (ಸಸ್ಯ ರೋಗಶಾಸ್ತç)
3 ಶ್ರೀ ಮಲ್ಲಪ್ಪ ಜೆ ಮಡೋಳ್ಳಿ ಸಹಾಯಕ ಪ್ರಾಧ್ಯಾಪಕರು (ಕೃಷಿ ಅಬಿಯಂತರರು)


ಬೋಧಕ ವರ್ಗ (ಗುತ್ತಿಗೆ ಪ್ರಾಧ್ಯಾಪಕರು / ಸಹಾಯಕ ಪ್ರಾಧ್ಯಾಪಕರು)
1 ಡಾ. ನಾಗರಾಜು ಎಚ್.ಟಿ ತೋಟಗಾರಿಕೆ
2 ಡಾ.ಆರ್.ಕೃಷ್ಣ ಕಿಶೋರ್ ಸಸ್ಯ ಜೀವ ರಸಾಯನಶಾಸ್ತç/ಜೈವಿಕ ತಂತ್ರಜ್ಞಾನ
3 ಶ್ರೀ.ಶಶಿಕಾಂತ್.ಟಿ.ಸಿ ದೈಹಿಕ ಶಿಕ್ಷಣ
4 ಕು.ದೀಪಾ ಕನ್ನಡ
5 ಶ್ರೀ ಚೇತನ್ ಇ ಇಂಗ್ಲೀಷ್
6 ಡಾ.ಮಮತಾ ಖಂಡಪ್ಪಗೊಳ್ ಸಸ್ಯತಳಿ ಅಭಿವೃದ್ಧಿ ಶಾಸ್ತç
7 ಡಾ. ಮುತ್ತೆಪ್ಪ ಚಿಗಡೊಳ್ಳಿ ಕೃಷಿ ವಿಸ್ತರಣೆ
8 ಡಾ. ಶ್ರೀ ಹರ್ಷ ಕುಮಾರ್ ಬೇಸಾಯಶಾಸ್ತç
9 ಶ್ರೀ ನಿತ್ಯಾನಂದ ಎನ್ ಬೀಜವಿಜ್ಞಾನ ಮತ್ತು ತಂತ್ರಜ್ಞಾನ


ಕೃಷಿ ವಿಜ್ಞಾನ ಕೇಂದ್ರ
1 ಡಾ.ಯೋಗೆಶ್.ಜಿ.ಎಸ್ ವಿಜ್ಞಾನಿಗಳು (ಮಣ್ಣು ವಿಜ್ಞಾನ)
2 ಡಾ.ಮೋಹನ್ ಕುಮಾರ್.ಎ.ಬಿ ವಿಜ್ಞಾನಿಗಳು (ತೋಟಗಾರಿಕೆ)
3 ಡಾ.ಚಂದ್ರಶೇಖರ್.ಎಸ್.ಕಳ್ಳಿಮನಿ ವಿಜ್ಞಾನಿಗಳು (ರೇಷ್ಮೆ ಕೃಷಿ)
4 ಡಾ. ಶೃತಿ ಎಂ ಕೆ ವಿಜ್ಞಾನಿಗಳು (ಬೇಸಾಯಶಾಸ್ತç)
5 ಡಾ.ಬಾಪುರದ ಪೊಂಪನಗೌಡ. ಕಾರ್ಯಕ್ರಮ ಸಹಾಯಕರು


ಅಖಿಲ ಭಾರತ ಸುಸಂಘಟಿತ ಅಭಿವೃದ್ಧಿ ಪ್ರಾಯೋಜನೆಗಳು (ಜೋಳ ಮತ್ತು ಹತ್ತಿ)
1 ಡಾ.ಸೋಮು.ಜಿ ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು (ಅಖಿಲ ಭಾರತ ಸುಸಂಘಟಿತ ಜೋಳದ ಅಭಿವೃದ್ಧಿ ಪ್ರಾಯೋಜನೆ)
2 ಡಾ.ಶಶಿಕುಮಾರ್.ಸಿ ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು (ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆ)
3 ಡಾ.ಶಿವರಾಯ್ ನಾವಿ ಸಹಾಯಕ ಕೀಟಶಾಸ್ತçಜ್ಞರು (ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆ)


ಸಹಾಯಕ ಕೀಟಶಾಸ್ತçಜ್ಞರು (ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆ): ಈ ಆವರಣದಲ್ಲಿರುವ ಕೃಷಿ ವಿಜ್ಞಾನ ಕೇಂದ್ರವು ರೈತರು ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ಒಂದೇ ಸೂರಿನಡಿ ಮಾಹಿತಿ ಸೌಲಭ್ಯ ಒದಗಿಸುವ ಏಕಗವಾಕ್ಷಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ವಿವಿಧ ಕೃಷಿ ವಿಷಯಗಳ ವಿಜ್ಞಾನಿಗಳಿದ್ದು ರೈತರ ಹೊಲದಲ್ಲಿ ಬೆಳೆ ಕ್ಷೇತ್ರ ಪರೀಕ್ಷೆ, ಹೊಸದಾಗಿ ಬಿಡುಗಡೆಯಾಗಿರುವ ತಂತ್ರಜ್ಞಾನಗಳ ಪ್ರಸರಣೆಗಾಗಿ ಮುಂಚೂಣಿ ಪ್ರಾತ್ಯಕ್ಷಿಕೆಗಳು, ಬೆಳೆ ಕ್ಷೇತ್ರೋತ್ಸವ, ಕೃಷಿ ವಸ್ತು ಪ್ರದರ್ಶನ ಹಾಗೂ ರೈತರು ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ತರಭೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ : ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಡಿಯಲ್ಲಿ ಸುಮಾರು ೩ ತಿಂಗಳುಗಳ ಕಾಲ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದ್ದು ಪ್ರಸ್ತುತ ಚಾಮರಾಜನಗರ ತಾಲ್ಲೋಕಿನ ೨ ಹಳ್ಳಿಗಳಲ್ಲಿ ಶಿಬಿರವನ್ನು ಹಮ್ಮಿಕೊಂಡು ಯಶಸ್ವಿಯಾಗಿ ಪೊರ್ಣಗೊಳಿಸಲಾಯಿತು.

ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ: ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸುಮಾರು ೫ ತಿಂಗಳುಗಳ ಕಾಲ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಲಳ್ಳಲಾಗಿದ್ದು ಪ್ರಸ್ತುತ ವರ್ಷದಲ್ಲಿ ಜೈವಿಕ ಪೀಡೆನಾಶಕ ಮತ್ತು ಜೈವಿಕ ಗೊಬ್ಬರಗಳ ಉತ್ಪಾದನಾ ತಾಂತ್ರಿಕತೆ ಕುರಿತು ೧೬ ವಿದ್ಯಾರ್ಥಿಗಳ ಒಂದು ಗುಂಪಿಗೆ ಹಾಗೂ ತೋಟಗಾರಿಕ ಬೆಳೆಗಳ ವಾಣಿಜ್ಯ ಉತ್ಪಾದನಾ ಮತ್ತು ಸಾವಯವ ಗೊಬ್ಬರಗಳ ಉತ್ಪಾದನೆ ಕುರಿತಂತೆ ಮತ್ತೊಂದು ೧೬ ವಿದ್ಯಾರ್ಥಿಗಳ ಗುಂಪಿಗೆ ಬೋಧನೆ ಮಾಡಲಾಗುತ್ತಿದೆ.

ಸಂಶೋಧನೆ: ಮಹಾವಿದ್ಯಾಲಯದ ಆವರಣದಲ್ಲಿ ಅಖಿಲ ಭಾರತ ಸುಸಂಘಟಿತ ಪ್ರಾಯೋಜನೆಯಲ್ಲಿ ಜೋಳ ಮತ್ತು ಹತ್ತಿಯಲ್ಲಿ ಸಂಶೋಧನೆ ನಡೆಯುತ್ತಿದ್ದು, ಸುದಾರಿತ ತಂತ್ರಜ್ಞಾನಗಳು, ರೋಗ/ಕೀಟ ನಿರೋಧಕ ತಳಿಗಳ ಪರೀಕ್ಷೆ ಹಾಗೂ ಜಿಲ್ಲೆಗೆ ಸೂಕ್ತವಾದ ತಳಿಗಳನ್ನು ಅಭಿವೃದ್ದಿ ಪಡಿಸುವಂತಸಂಶೋಧನಾ ಕಾರ್ಯಕ್ರಮಗಳು ನಡೆಯುತ್ತಿವೆ.

ಸಂಪರ್ಕಿಸಿ ವಿಶೇಷಾಧಿಕಾರಿಗಳು
ಕೃಷಿ ಮಹಾವಿದ್ಯಾಲಯ, ಚಾಮರಾಜನಗರ
ಪೊ. 08226-297098, ಪೊ..8277893972
ಇ ಅಂಚೆ: This email address is being protected from spambots. You need JavaScript enabled to view it.

Additional information