Department of Agricultural Extension - k
ಕೃಷಿ ವಿಸ್ತರಣಾ ವಿಭಾಗ
ಕೃಷಿ ವಿಸ್ತರಣಾ ವಿಭಾಗವು ೧೯೬೦-೬೧ರಲ್ಲಿ ಅಂತಿಮ ವರ್ಷದ ಬಿ.ಎಸ್ಸಿ. (ಕೃಷಿ) ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯಪಠ್ಯಕ್ರಮವಾಗಿಕೃಷಿ ವಿಸ್ತರಣಾ ವಿಷಯವನ್ನುಸೇರಿಸುವ ಮೂಲಕ ಪ್ರಾರಂಭವಾಯಿತು.ಡಾ.ಕೆ.ಎ. ಜಾಲಿಹಾಳ್ರವರು ಕೃಷಿ ವಿಸ್ತರಣಾ ವಿಭಾಗದ ಪ್ರಥಮ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಾರೆ. ಕೃಷಿ ವಿಸ್ತರಣಾ ವಿಭಾಗವುಅತ್ಯಂತಕಿರಿಯ ವಿಭಾಗವಾಗಿದ್ದು, ೧೯೬೬-೬೭ನೇ ಸಾಲಿನಲ್ಲಿ ಸ್ನಾತಕೋತ್ತರ ಬೋಧನೆಯನ್ನು ಪ್ರಾರಂಭಿಸಲಾಯಿತು.
ಬೆAಗಳೂರು ಕೃಷಿ ವಿಶ್ವವಿದ್ಯಾನಿಲಯವು೧೯೯೫-೯೬ ಸಾಲಿನಲ್ಲಿ “ಗ್ರಾಮೀಣ ಕೃಷಿ ಕಾರ್ಯಾನುಭವಕಾರ್ಯಕ್ರಮ” ಎಂಬ ಪ್ರಾಯೋಗಿಕ ಕಲಿಕಾ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದಎಲ್ಲಾ ಸ್ನಾತಕ ಪದವಿಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರಿಚಯಿಸಿತು.ಈ ಕಾರ್ಯಕ್ರಮವುಒಂದು ಸೆಮಿಸ್ಟರ್ನಅವಧಿಯದಾಗಿದ್ದು,ಒಟ್ಟು ೨೦ ಕ್ರೆಡಿಟ್ಗಳನ್ನ ಒಳಗೊಂಡಿತ್ತು.ಗ್ರಾಮೀಣ ಮಟ್ಟದಲ್ಲಿಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ವಿಶ್ವವಿದ್ಯಾನಿಲಯದಎಲ್ಲಾ ವಿಭಾಗಗಳು ಪಾಲ್ಗೊಳ್ಳುವುದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು.
ನಿವೃತ್ತ ಕುಲಪತಿಗಳಾದ ಡಾ.ಕೆ.ನಾರಾಯಣಗೌಡರವರುಕಾರ್ಯಕ್ರಮದಪ್ರಥಮಸಂಯೋಜಕರಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು.ಕೃಷಿ ವಿಸ್ತರಣಾ ವಿಭಾಗವು“ಗ್ರಾಮೀಣ ಕೃಷಿ ಕಾರ್ಯಾನುಭವಕಾರ್ಯಕ್ರಮದ” ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿರುತ್ತದೆ.
ವಿಶ್ವವಿದ್ಯಾನಿಲಯವು ೨೦೧೨-೧೩ನೇ ಶೈಕ್ಷಣಿಕ ವರ್ಷದಲ್ಲಿಗ್ರಾಮೀಣ ಕೃಷಿ ಕಾರ್ಯಾನುಭವಕಾರ್ಯಕ್ರಮವನ್ನು ೮ನೇ ಸೆಮಿಸ್ಟರ್ನ ಬದಲಾಗಿ ೭ನೇ ಸೆಮಿಸ್ಟರ್ನಲ್ಲಿಪುನರ್ರಚಿಸಲಾಯಿತು.ಕಾರ್ಯಕ್ರಮದಪುನರ್ರಚನೆಯಉದ್ದೇಶವೆಂದರೆ: ವಿದ್ಯಾರ್ಥಿಗಳ ಗ್ರಾಮ ವಾಸ್ತವ್ಯವು ಬೆಳೆ ಋತುವಿಗೆ ಹೊಂದಿಕೆ ಮಾಡುವುದು ಮತ್ತುವಿದ್ಯಾರ್ಥಿಗಳನ್ನು ರೈತ ಸಂಪರ್ಕಕೇAದ್ರಕ್ಕೆ ನಿಯೋಜಿಸುವುದು ಹಾಗೂ ವಿದ್ಯಾರ್ಥಿಗಳ ಗ್ರಾಮ ವಾಸ್ತವ್ಯವನ್ನು ೪ ವಾರಗಳಿಂದ ೧೨ ವಾರಗಳಿಗೆ ವಿಸ್ತರಿಸಿದ್ದರಿಂದ,ವಿದ್ಯಾರ್ಥಿಗಳು ರೈತರೊಡನೆ ಹೊಂದಿಕೊAಡು ಭೂಆಧಾರಿತ ಉಧ್ಯಮಗಳ ನೈಜಹಾಗೂ ಪ್ರಾಯೋಗಿಕಅನುಭವವನ್ನು ಪಡೆಯಲು ಅವಕಾಶ ಕಲ್ಪಿಸುವುದು ಮತ್ತು ವಿವಿಧ ವಿಸ್ತರಣಾ ವಿಧಾನಗಳ ಮೂಲಕ ರೈತರಿಗೆತಂತ್ರಜ್ಞಾನಗಳನ್ನು ಪರಿಚಯಿಸುವುದು. ವಿಶ್ವÀವಿದ್ಯಾನಿಲಯದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೃಷಿ ಅಭಿವೃದ್ಧಿಯಲ್ಲಿತೊಡಗಿರುವ ವಿವಿಧ ಇಲಾಖೆಗಳ ಸಂಪರ್ಕವನ್ನ ಸಾಧಿಸಲು ಅನುವು ಮಾಡಿಕೊಡುತ್ತದೆ.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಚಯಿಸಿದ ತಂತ್ರಜ್ಞಾನಗಳ ಕಾರ್ಯಕ್ಷಮತೆಯನ್ನುಶಿಕ್ಷಕರು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿರುತ್ತದೆ.ಈ ಕಾರ್ಯಕ್ರಮವುರೈತರಿಗೆ ಸಮಯಕ್ಕನುಗುಣವಾಗಿತಾಂತ್ರಿಕ ಮಾಹಿತಿತಲುಪಿಸುವುದಲ್ಲದೆ, ರೈತರಿಂದತAತ್ರಜ್ಞಾನ ಅಳವಡಿಕೆಗೆ ಸಹಕಾರಿಯಾಗಿದೆ ಮತ್ತುಕೃಷಿಕರಆರ್ಥಿಕ ಮಟ್ಟವನ್ನು ಹೆಚ್ಚಿಸಲುಉಪಕಾರಿಯಾಗಿದೆ.ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆರೂ.೧೫೦೦/-ರAತೆಮೂರು ತಿಂಗಳುಗಳ ಕಾಲ ಗೌರವಧನವನ್ನು ನೀಡುವುದಲ್ಲದೆಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕರಿಸುತ್ತಾ ಬಂದಿರುತ್ತದೆ.
ವಿಸ್ತರಣಾ ವಿಭಾಗವು೫ನೇ ಡೀನ್ ಸಮಿತಿಯ ಶಿಫಾರಸ್ಸಿನಂತೆ ೨೦೧೦-೧೧ ಶೈಕ್ಷಣಿಕ ವರ್ಷದಿಂದ ಕೃಷಿ “ಪತ್ರಿಕೋದ್ಯಮ ಮತ್ತು ಮಲ್ಟಿಮೀಡಿಯಾ ಪ್ರೊಡಕ್ಷನ್” ಎಂಬ ಅನುಭವಾತ್ಮಕ ಕಲಿಕೆ ವಿಷಯದಲ್ಲಿ ಬೋಧನೆಯನ್ನು ಪ್ರಾರಂಬಿಸಿತು. ವಿದ್ಯಾರ್ಥಿಗಳಿಗೆತಂತ್ರಜ್ಞಾನ ಬಳಸಿ ಸಾಕ್ಷö್ಯ ಚಿತ್ರಗಳನ್ನು ನಿರ್ಮಿಸಲುಕೋರ್ಸ್ನಲ್ಲಿ ಅವಕಾಶ ಮಾಡಿಕೊಡಲಾಯಿತು. ಅದರಂತೆ ವಿದ್ಯಾರ್ಥಿಗಳು ಕೃಷಿಗೆ ಸಂಬAಧಪಟ್ಟಹಲವು ಸಾಕ್ಷö್ಯ ಚಿತ್ರಗಳನ್ನು ನಿರ್ಮಿಸಿರುತ್ತಾರೆ.
ಕಳೆದ ಆರು ದಶಕಗಳಲ್ಲಿ ಕೃಷಿ ವಿಸ್ತರಣಾ ವಿಭಾಗದಲ್ಲಿ ೫೪೬ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ೧೫೭ ಪಿಹೆಚ್.ಡಿ. ವಿದ್ಯಾರ್ಥಿಗಳು ಪದವಿ ಪಡೆದಿರುತ್ತಾರೆ. ವಿಭಾಗದ ವಿದ್ಯಾರ್ಥಿಗಳು ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಉನ್ನತ ಉದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.ಕೃಷಿ ವಿಸ್ತರಣಾವಿಭಾಗದಲ್ಲಿಸ್ನಾತಕೋತ್ತರ ಪದವಿ ಪಡೆದವಿದೇಶಿ ವಿದ್ಯಾರ್ಥಿಗಳುಇರಾನ್, ಆಫ್ರಿಕಾ ಮತ್ತುಅಫ್ಘಾನಿಸ್ಥಾನ ದೇಶಗಳಲ್ಲಿ ವೃತ್ತಿಪರ ವಿಸ್ತರಣಾಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಮೀಣಅಭಿವೃದ್ಧಿಯಲ್ಲಿ ಕೃಷಿ ವಿಸ್ತರಣೆಯ ಪ್ರಾಮುಖ್ಯತೆಯನ್ನುಅರಿತುಇಫ್ಕೋ ಸಂಸ್ಥೆಯು“ಇಫ್ಕೋ ಪೀಠ”ವನ್ನು ೧೯೮೧ರಲ್ಲಿ ಕೃಷಿ ವಿಸ್ತರಣಾ ವಿಭಾಗÀದಲ್ಲಿಸ್ಥಾಪಿಸಿರುತ್ತದೆ.ವಿಭಾಗದಅಧ್ಯಾಪಕರುಆಧುನಿಕ ಮಾಹಿತಿತಂತ್ರಜ್ಞಾನವಿಧಾನಗಳನ್ನು ಬೋಧನೆಯಲ್ಲಿ ಅಳವಡಿಸಿಕೊಂಡಿರುತ್ತಾರೆಇದರಿAದ ಶಿಕ್ಷಕರ ಕಾರ್ಯಕ್ಷಮತೆ ಹೆಚ್ಚಿರುತ್ತದೆ. ವಿಸ್ತರಣಾ ವಿಭಾಗವು ವಿಶ್ವವಿದ್ಯಾನಿಲಯದದೊಡ್ಡ ವಿಭಾಗವಾಗಿದ್ದು, ಸೋಷಿಯಾಲಜಿ, ಇಂಗ್ಲೀಷ್ ಮತ್ತು ಸೈಕಾಲಜಿ ವಿಭಾಗಗಳು ಒಳಗೊಂಡಿರುತ್ತದೆ.
ವಿಭಾಗದ ವೃತ್ತಿಪರ ವಿಸ್ತರಣಾತಜ್ಞರಾದಡಾ.ನಾರಾಯಣಗೌಡ, ಡಾ.ಎಂ.ಎಸ್. ನಟರಾಜುರವರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ ಹಾಗೂ ಡಾ.ಎಸ್.ವಿ. ಸುರೇಶರವರು ಕುಲಪತಿಗಳಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುತ್ತಾರೆ,ಇದು ವಿಭಾಗಕ್ಕೆ ಹೆಮ್ಮೆಯ ವಿಷಯವಾಗಿರುತ್ತದೆ. ವಿಭಾಗದ ಕಾರ್ಯಕ್ರಮಗಳು .
ಶಿಕ್ಷಣ ಕೃಷಿ ವಿಸ್ತರಣಾವಿಭಾಗವು ಬಿ.ಎಸ್ಸಿ. (ಆನರ್ಸ್) ಕೃಷಿ, ಬಿ.ಎಸ್ಸಿ. (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ ಹಾಗೂ ಬಿ.ಟೆಕ್. (ಕೃಷಿ ಇಂಜಿನಿಯರಿAಗ್) ಸ್ನಾತಕ ವಿದ್ಯಾರ್ಥಿಗಳಿಗೆ ವಿಸ್ತರಣಾ ವಿಷಯದಲ್ಲಿ ಬೋಧನೆ ಮತ್ತು ಸ್ನಾತಕೋತ್ತರ ಹಾಗೂ ಪಿ,ಹೆಚ್.ಡಿ. ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ತೊಡಗಿಸಿಕೊಂಡಿದೆ. .
Department Activities
ಕೃಷಿ ವಿಸ್ತರಣಾ ವಿಭಾಗದಅಧ್ಯಾಪಕರುಸರ್ಕಾರದಅಭಿವೃದ್ಧಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಹಾಗೂ ಇತರೆ ವೃತ್ತಿಪರರಿಗೆÀವಿವಿಧತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ವಿಭಾಗದಆಯ್ದತರಬೇತಿ ಕಾರ್ಯಕ್ರಮಗಳು ಈ ಕೆಳಕಂಡAತಿರುತ್ತದೆ.
- ವಿಸ್ತರಣಾ ವಿಧಾನಗಳ ಮತ್ತು ಸಂವಹನ ತಂತ್ರಗಳು.
- ಕೃಷಿ ವಿಸ್ತರಣೆಗಾಗಿ ಮಾಹಿತಿ ನೆರವು.
- ವಿಸ್ತರಣಾ ಶಿಕ್ಷಣ ವಿಧಾನಗಳು.
- ತಂತ್ರಜ್ಞಾನ ವರ್ಗಾವಣೆಯಲ್ಲಿ ಸಮೂಹ ಮಾಧ್ಯಮಗಳ ಬಳಕೆ. ವಿಚಾರ ಸಂಕೀರ್ಣ ಮತ್ತು ಬೇಸಿಗೆ ತರಬೇತಿ ವೃತ್ತಿಪರರವಿಸ್ತರಣಾಕಾರ್ಯಕರ್ತರಅನುಕೂಲಕ್ಕಾಗಿ ವಿಭಾಗವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ:
- ಕೃಷಿ ಅಭಿವೃದ್ಧಿ ಮತ್ತುಅದರಕಾರ್ಯತಂತ್ರ ವಿಧಾನದ ಬಗ್ಗೆ ತರಬೇತಿಕಾರ್ಯಕ್ರಮ
- ಸ್ವಯಂಉದ್ಯೋಗಕ್ಕಾಗಿ ಕೃಷಿ ಶಿಕ್ಷಣ ಮತ್ತು ಪ್ರಾದೇಶಿಕ ಅಭಿವೃದ್ಧಿಯಕುರಿತುರಾಷ್ಟಿçÃಯ ವಿಚಾರ ಸಂಕಿರಣ.
- ಐಸಿಎಆರ್ (ಭಾರತೀಯ ಕೃಷಿ ಅನುಸಂಧಾನ ಪರಿಷತ್) ಪ್ರಾಯೋಜಿತಕಿರು ಕೋರ್ಸ್ಗಳು
ಕೃಷಿ ವಿಸ್ತರಣಾ ವಿಭಾಗವುವಿದ್ಯಾರ್ಥಿಗಳ ಮೂಲಕ ಕೃಷಿ ವಿಸ್ತರಣೆಗೆ ಸಂಬAಧಪಟ್ಟ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುತ್ತದೆ. ವಿಭಾಗದಅಧ್ಯಾಪಕರು ವಿಶ್ವವಿದ್ಯಾನಿಲಯ ಹಾಗೂ ಇತರೆ ಸಂಘ ಸಂಸ್ಥೆಗಳ ಪ್ರಾಯೋಜಿತ ಸಂಶೊಧನಾ ಯೋಜನೆಗಳಲ್ಲಿ ತೊಡಗಿಕೊಂಡಿರುತ್ತಾರೆ.
ವಿಭಾಗವುಇದುವರೆಗೂ ಸುಮಾರು ೨೦ ಸಂಶೋಧನಾ ಯೋಜನೆಗಳನ್ನ ಪೂರ್ಣಗೊಳಿಸಿರುತ್ತದೆ. ಸುಮಾರು ೬ ಯೋಜನೆಗಳಿಗೆ ಅಂತರಾಷ್ಟಿçÃಯ ಸಂಸ್ಥೆಗಳಾದ ಯು.ಎಸ್.ಎ.ಐ.ಡಿ.,ಜಪಾನಿನ ಬ್ಯಾಂಕ್ಆಫ್ಇAಟರ್ನ್ಯಾಷನಲ್ಕೋಪರೇಷನ್,ರಾಕ್ಫೆಲ್ಲರ್ಮತ್ತು ಮೆಕ್ನೈಟ್ ಸಂಸ್ಥೆಗಳಿAದ ಧನಸಹಾಯ ಪಡೆದಿರುತ್ತದೆ. ಉಳಿದ ಯೋಜನೆಗಳನ್ನು ವಿಶ್ವಬ್ಯಾಂಕ್,ಯು.ಎ.ಎಸ್.,ಎನ್.ಡಿ.ಡಿ.ಬಿ., ಸರ್ಕಾರೇತರ ಸಂಸ್ಥೆಗಳು, ವಾಣಿಜ್ಯ ಸಚಿವಾಲಯ, ಜೈವಿಕತಂತ್ರಜ್ಞಾನ ಇಲಾಖೆ,ತೆಂಗುಅಭಿವೃದ್ಧಿ ಮಂಡಳಿ, ಕಾಫಿ ಮಂಡಳಿಗಳ ಧನ ಸಹಾಯ ಪಡೆದು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ..
- ಶಿಕ್ಷಣ ತಾಂತ್ರಿಕತೆಗಳು
- ಗ್ರಾಮೀಣಾಭಿವೃದ್ಧಿ
- ಸಮುದಾಯಅಭಿವೃದ್ಧಿ
- ಎಣ್ಣೆಕಾಳು ಅಭಿವೃದ್ಧಿ
- ಕೃಷಿ ಅರಣ್ಯ
- ಕೃಷಿ ತಂತ್ರಜ್ಞಾನ ಅಳವಡಿಕೆ
- ಪೌಷ್ಠಿಕತೆ
- ರಾಷ್ಟೀಯ ಕೃಷಿ ನೀತಿ
- ನವೀನ ತಂತ್ರಜ್ಞಾನಗಳು
- ಮಾರುಕಟ್ಟೆ ಸೂಕ್ತತೆ
- ಬಡ ಎಸ್ಸಿ/ಎಸ್ಟಿ ಮಹಿಳಾ ಸಂಸ್ಥೆಗಳ ಸ್ಥಾಪನೆ
- ನೀರು ಬಳಕೆ ಸಂಘಗಳ ರಚನೆ
- ಸಂಘ/ಸAಸ್ಥೆಗಳು ಕಾರ್ಯಕ್ಷಮತೆ ಸುಧಾರಣೆ
ಈ ಮೂಲಕ ವಿಭಾಗದಅಧ್ಯಾಪಕರು ವಿಸ್ತರಣಾ ವಿಜ್ಞಾನಕ್ಕೆ ಹೆಚ್ಚಿನಕೊಡಿಗೆ ನೀಡಿರುತ್ತಾರೆ.
- ಕೃಷಿ ತಂತ್ರಜ್ಞಾನಗಳ ಸಂವಹನೆÀ ಮತ್ತು ಅಳವಡಿಕೆ
- ಮಾನವ ಸಂಪನ್ಮೂಲ ಅಭಿವೃದ್ಧಿ
- ಕೃಷಿ ಅಭಿವೃದ್ಧಿ, ಗ್ರಾಮೀಣಅಭಿವೃದ್ಧಿ ಮತ್ತು ಬಡತನ ನಿರ್ಮೂಲನಾ ಕಾರ್ಯಕ್ರಮಗಳ ಪರಿಣಾಮ
- ಸಂವಹನೆ, ಪತ್ರಿಕೋಧ್ಯಮ ಹಾಗೂ ಸಮೂಹ ಮಾಧ್ಯಮ
- ಕೃಷಿ ಉತ್ಪಾದನೆ ಮತ್ತು ಸುಸ್ಥಿರತೆ
- ಯುವ ಮತ್ತು ಮಹಿಳಾ ಸಬಲೀಕರಣ
- ಕೃಷಿ ಮಾರುಕಟ್ಟೆ ಮತ್ತು ಬೆಲೆಗಳ ಏರಿಳಿತ
- ಕೃಷಿ ವಿಸ್ತರಣಾ ವ್ಯವಸ್ಥೆ
- ಪರಿಸರ ಕಾಳಜಿ ಮತ್ತು ಹವಾಮಾನ ಬದಲಾವಣೆ
- ಗ್ರಾಮೀಣಜೀವನೋಪಾಯ ಮತ್ತು ಸಮಗ್ರಅಭಿವೃದ್ಧಿ
- ಸಮೂಹಿಕ ಭಾಗವಹಿಸುವಿಕೆ ವಿಸ್ತರಣಾ ವಿಧಾನಗಳು
- ಸಾಮಾಜಿಕ ಬಂಡವಾಳ ಅಭಿವೃದ್ಧಿ
- ಸರಕುಆಧಾರಿತ ಸಂಸ್ಥೆ / ರೈತ ಗುಂಪುಗಳು
- ನೈಸರ್ಗಿಕ ಸಂಪನ್ಮೂಲ ನಿರ್ವಹಣೆ
- ವಿಸ್ತರಣಾ ಸಂಶೋಧನಾ ವಿಧಾನಗಳು
- ಹವಾಮಾನಚತುರ ಕೃಷಿ
Contact:
ಡಾ. ವೈ.ಎನ್. ಶಿವಲಿಂಗಯ್ಯ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ.
ಪರಿಣಿತಿ: ಯುವಕರಅಭಿವೃದ್ಧಿಗ್ರಾಮೀಣಅಭಿವೃದ್ಧಿ ಪರಿಣಾಮ ವಿಶ್ಲೇಷuÉ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ.
ಪರಿಣಿತಿ: ಯುವಕರಅಭಿವೃದ್ಧಿಗ್ರಾಮೀಣಅಭಿವೃದ್ಧಿ ಪರಿಣಾಮ ವಿಶ್ಲೇಷuÉ
+91-9611457341
This email address is being protected from spambots. You need JavaScript enabled to view it.
,
This email address is being protected from spambots. You need JavaScript enabled to view it.
Faculty
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ
ಪರಿಣಿತಿ: ಯುವಕರಅಭಿವೃದ್ಧಿಗ್ರಾಮೀಣಅಭಿವೃದ್ಧಿ ಪರಿಣಾಮ ವಿಶ್ಲೇಷuÉ
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-9611457341
ಪ್ರಾಧ್ಯಾಪಕರು
ಪರಿಣಿತಿ: ಮಾಹಿತಿತಂತ್ರಜ್ಞಾನ ನಿರ್ವಹಣೆ ಮತ್ತುಕೌಶಲ್ಯಅಭಿವೃದ್ಧಿ
This email address is being protected from spambots. You need JavaScript enabled to view it.
+91-9731876687
080 23330153, Extn. 367
ಸಹ ಪ್ರಾಧ್ಯಾಪಕರು
ಪರಿಣಿತಿ:ತರಬೇತಿ ನಿರ್ವಹಣೆ ಮತ್ತು ಸಾಮರ್ಥ್ಯಅಭಿವೃದ್ಧಿ
This email address is being protected from spambots. You need JavaScript enabled to view it.
+91-9986635272
ಸಹಾಯಕ ಪ್ರಾಧ್ಯಾಪಕರು
ಪರಿಣಿತಿ: ಸಂವಹನೆ ಮತ್ತು ವಿಸ್ತರಣಾ ವಿಧಾನಗಳು
This email address is being protected from spambots. You need JavaScript enabled to view it.
+91-9449429217
ಸಹಾಯಕ ಪ್ರಾಧ್ಯಾಪಕರು-ಆಂಗ್ಲ ಭಾಷೆ (ಗುತ್ತಿಗೆ)
ಪರಿಣಿತಿ:ಆಂಗ್ಲ ಸಾಹಿತ್ಯ
This email address is being protected from spambots. You need JavaScript enabled to view it.
+91-9113537288
ಸಹಾಯಕ ಪ್ರಾಧ್ಯಾಪಕರು (ಗುತ್ತಿಗೆ)
ಪರಿಣಿತಿ: ತಂತ್ರಜ್ಞಾನ ವರ್ಗಾವಣೆ ಮತ್ತು ಪರಿಣಾಮ ವಿಶ್ಲೇಷಣೆ
This email address is being protected from spambots. You need JavaScript enabled to view it.
+91-9036506569
ಸಹಾಯಕ ಪ್ರಾಧ್ಯಾಪಕರು (ಗುತ್ತಿಗೆ)
ಪರಿಣಿತಿ: ಪರಿಣಾಮ ವಿಶ್ಲೇಷಣೆ, ಗ್ರಾಮೀಣಅಭಿವೃದ್ಧಿ ಮತ್ತುತರಬೇತಿ ನಿರ್ವಹಣೆ
This email address is being protected from spambots. You need JavaScript enabled to view it.
+91-9449142738